ನಾನೇನೂ ಮೆಷಿನ್ ಅಲ್ಲ: ಸೈನಾ ನೆಹ್ವಾಲ್

ನನಗೆ ಯಾವುದನ್ನೂ ಮೈ ಮೇಲೆ ಎಳೆದುಕೊಂಡು ಹೊರೆಯಾಗಿಸಲು ಇಷ್ಟವಾಗಲ್ಲ. ಒಂದರ ಹಿಂದೆ ಟೂರ್ನ್‌ಮೆಂಟ್‌ಗಳಲ್ಲಿ...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ತಿರುವನಂತಪುರಂ: ನನಗೆ ಯಾವುದನ್ನೂ ಮೈ ಮೇಲೆ ಎಳೆದುಕೊಂಡು ಹೊರೆಯಾಗಿಸಲು ಇಷ್ಟವಾಗಲ್ಲ. ಒಂದರ ಹಿಂದೆ ಟೂರ್ನ್‌ಮೆಂಟ್‌ಗಳಲ್ಲಿ ಭಾಗವಹಿಸಲೂ ನಾನು ಇಷ್ಟಪಡುವುದಿಲ್ಲ. ಮುಂದಿನ ವರ್ಷ ಜಕಾರ್ತಾ ವರ್ಲ್ಡ್ ಚಾಂಪಿಯನ್‌ಶಿಪ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿ ಎಂದು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.

ತಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡೇ ಮುಂದಿನ ವರ್ಷ ಕೆಲವೊಂದು ರಾಷ್ಟ್ರೀಯ ಪಂದ್ಯಾಟಗಳನ್ನು ಆಡದೇ ಇರಲು ಸೈನಾ ತೀರ್ಮಾನಿಸಿದ್ದಾಳೆ. ಮುಂದಿನ ವರ್ಷ ಜನವರಿ-ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ನ್ಯಾಷನಲ್ ಗೇಮ್ಸ್ ಮತ್ತು ನ್ಯಾಷನಲ್ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಸೈನಾ ಹೇಳಿದ್ದಾಳೆ.

ನಾನೂ ಮನುಷ್ಯಳು, ಯಂತ್ರ ಅಲ್ಲ. ನನ್ನ ದೇಹದ ಸಾಮರ್ಥ್ಯವನ್ನು ನೋಡಿಕೊಂಡು ನಾನು ಆಟವಾಡಬೇಕಾಗುತ್ತದೆ. ನಾನು ವರ್ಷದಲ್ಲಿ 12 ರಿಂದ 15 ಟೂರ್ನಮೆಂಟ್‌ಗಳನ್ನು ಆಡುತ್ತಿದ್ದೇನೆ. ನಾನು ಯಾವ ಪಂದ್ಯಕ್ಕೆ ಆದ್ಯತೆ ನೀಡಿಬೇಕೆಂದು ನಾನು ಯೋಚಿಸಿರುತ್ತೇನೆ. ಹೆಚ್ಚಿನ ಸಲಹೆಗಳನ್ನು ನಾನು ನನ್ನ ಕೋಚ್ ಯು.ವಿಮಲ್ ಕುಮಾರ್ ಅವರಿಂದ ಮತ್ತು ನನ್ನ ಕುಟುಂಬದಿಂದ ಪಡೆಯುತ್ತೇನೆ.

ಸದ್ಯ ನಾನೀಗ ಒಂದು ವಾರದ ಬ್ರೇಕ್ ತೆಗೆದುಕೊಂಡಿದ್ದೇನೆ, ಮುಂದಿನ ಸೋಮವಾರ ಅಥವಾ ಮಂಗಳವಾರ ಬೆಂಗಳೂರಿನಲ್ಲಿ ನನ್ನ ಕೋಚ್ ನಿಂದ ಮತ್ತೆ ತರಬೇತಿ ಪಡೆದುಕೊಳ್ಳಲಿದ್ದೇನೆ ಎಂದು ಸೈನಾ ಹೇಳಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com