ಸಚಿನ್ ತೆಂಡೂಲ್ಕರ್
ಕ್ರೀಡೆ
ವಿಶ್ವಕಪ್ ಆಡುವ ವಿಶ್ವಾಸವಿರಲಿಲ್ಲ
2007ರಲ್ಲಿ ನಿರಾಸೆ ಅನುಭವಿಸಿ ಭಾರತಕ್ಕೆ ಮರಳಿದ ನಂತರ, ತೀವ್ರ ಬೇಸರಗೊಂಡದ್ದೆ...
ನವದೆಹಲಿ: ವೆಸ್ಟ್ ಇಂಡೀಸ್ ನೆಲದಲ್ಲಿ ನಡೆದ 2007ರ ವಿಶ್ವಕಪ್‌ವೇಳೆ ಮೊದಲ ಸುತ್ತಿನಲ್ಲೇ ಭಾರತ ನಿರ್ಗಮಿಸಿದ ನಂತರ, ಮತ್ತೆ 2011ರ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ವಿಶ್ವಾಸವಿರಲಿಲ್ಲ ಎಂದು ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
2007ರಲ್ಲಿ ನಿರಾಸೆ ಅನುಭವಿಸಿ ಭಾರತಕ್ಕೆ ಮರಳಿದ ನಂತರ, ತೀವ್ರ ಬೇಸರಗೊಂಡದ್ದೆ. ಆಗ 2011ರ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಅನುಮಾನ ಹೊಂದಿದ್ದೆ.
ನನ್ನ ಸಹೋದರ ಹಾಗೂ ಕೆಲ ಸ್ನೇಹಿತರು 2011ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಹಿಡಿಯುವ ಕನಸು ಕಾಣುವಂತೆ ತಿಳಿಸಿದರು. ನಂತರ ವಿಶ್ವಕಪ್ ಗೆದ್ದ ಆ ಸಂದರ್ಭ ಮರೆಯಲು ಸಾಧ್ಯವಿಲ್ಲ ಎಂದು ಸಚಿನ್ ತಿಳಿಸಿದ್ದಾರೆ.

