ಅರವಿಂದ್ ಎ
ಕ್ರೀಡೆ
ಬಾಸ್ಕೆಟ್‌ಬಾಲ್: ಕರ್ನಾಟಕಕ್ಕೆ ಜಯ
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದ ಅಂತಿಮ ಘಟ್ಟದಲ್ಲಿ ನಿಯಂತ್ರಣ ಸಾಧಿಸಿದ ಕರ್ನಾಟಕ...
ಬಿಲ್ವಾರ: ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದ ಅಂತಿಮ ಘಟ್ಟದಲ್ಲಿ ನಿಯಂತ್ರಣ ಸಾಧಿಸಿದ ಕರ್ನಾಟಕ ಬಾಸ್ಕೆಟ್‌ಬಾಲ್ ತಂಡ, 65ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಆತಿಥೇಯ ರಾಜಸ್ಥಾನ ವಿರುದ್ಧ ಗೆಲುವು ದಾಖಲಿಸಿದೆ.
ಟೂರ್ನಿಯ ಎರಡನೇ ದಿನವಾದ ಮಂಗಳವಾರ ನಡೆದ ಮೊದಲ ಹಂತದ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ 84-70 (24-20, 21-20, 14-16, 25-14) ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಕರ್ನಾಟಕ ತಂಡದ ಪರ ಅರವಿಂದ್ ಎ 29, ಎಂ.ಆರ್ ಭಟ್ 17 ಅಂಕಗಳನ್ನು ಸಂಪಾದಿಸಿದರು. ಇನ್ನು ರಾಜಸ್ಥಾನ ತಂಡದ ಪರ ವಿನೋದ್ 35, ಹರ್ಷವರ್ಧನ್ 16, ಅನಿಲ್ ಕುಮಾರ್ 13, ನೀರಜ್ ಕೆ 11 ಅಂಕಗಳನ್ನು ಸಂಪಾದಿಸಿದರು. ಇನ್ನು ತಮಿಳುನಾಡು ತಂಡ ಭಾರತೀಯ ರೈಲ್ವೇಸ್ ವಿರುದ್ಧ 92-62 (32-20, 24-13, 20-15, 16-14) ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮಹಿಳೆಯರ ವಿಭಾಗದಲ್ಲಿ ಕೇರಳ ತಂಡ ಚತ್ತೀಸ್‌ಗಢ ವಿರುದ್ಧ 68-65 (20-14, 22-10, 15-16, 11-25) ಅಂಕಗಳಿಂದ ಮಣಿಸಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ