ಕತಾರ್‌ನಾಕ್ ಸ್ಟೇಡಿಯಂ!

ಪ್ರತಿಭಟನೆಗಳು ಎಷ್ಟೇ ಕಾವೇರಿದ್ದರೂ ಬ್ರೆಜಿಲ್‌ನಲ್ಲಿ ವಿಶ್ವಕಪ್ ಸುಗಮವಾಗಿ ತೆರೆಕಂಡಿತು. 2018ರ ಪಂದ್ಯಾವಳಿಗೆ...
ಕತಾರ್‌ನಾಕ್ ಸ್ಟೇಡಿಯಂ!

ಪ್ರತಿಭಟನೆಗಳು ಎಷ್ಟೇ ಕಾವೇರಿದ್ದರೂ ಬ್ರೆಜಿಲ್‌ನಲ್ಲಿ ವಿಶ್ವಕಪ್ ಸುಗಮವಾಗಿ ತೆರೆಕಂಡಿತು. 2018ರ ಪಂದ್ಯಾವಳಿಗೆ ರಷ್ಯಾ ಈಗಾಗಲೇ ಸಜ್ಜಾಗುತ್ತಿದೆ. ಆದರೆ, 2022ರ ಪಂದ್ಯಾವಳಿಯ ಬಿಡ್ ಗೆದ್ದಿರುವ ಕತಾರ್ ಈಗ ಸ್ಟೇಡಿಯಂಗಳನ್ನಲ್ಲ, ವಿವಾದದ ಗೂಡುಗಳನ್ನು ನಿರ್ಮಿಸುತ್ತಿದೆ!
ಕತಾರ್‌ನ ಕ್ರೀಡಾಂಗಣಗಳ ವಿನ್ಯಾಸವೇ ವಿಚಿತ್ರವಾಗಿವೆ. ನಿರ್ಮಾಣವಾಗಲಿರುವ 12 ಕ್ರೀಡಾಂಗಣಗಳ ನೀಲನಕ್ಷೆಯನ್ನು ಕತಾರ್ ಈಗಾಗಲೇ ಬಿಡುಗಡೆಗೊಳಿಸಿದೆ. ಕ್ರೀಡಾಂಗಣ ಕಟ್ಟಡ ಕಾರ್ಯದಲ್ಲಿ ಕೆಲಸಗಾರರ ಸ್ಥಿತಿಗತಿ ಮತ್ತು ಅಲ್ಲಿನ ಸೂಕ್ತ ಹವಾ ನಿಯಂತ್ರಕಗಳನ್ನು ಅಳವಡಿಕೆ ಬಗ್ಗೆಯೂ ಸಮಸ್ಯೆಗಳು ಎದ್ದಿವೆ.
ವಿನ್ಯಾಸಗಳ ವಿವಾದ
ಎರಡು ಸ್ಟೇಡಿಯಂಗಳ ವಿನ್ಯಾಸ ಸದ್ಯ ವಿವಾದ ಸೃಷ್ಟಿಸಿದೆ. 40 ಸಾವಿರ ಅಭಿಮಾನಿಗಳ ಸ್ಥಳಾವಕಾಶ ಹೊಂದಿರುವ ಅಲ್ ವಕ್ರಾಹ ಸ್ಟೇಡಿಯಂನ ಚಿತ್ರ ಮೊದಲನೇ ವಿವಾದ. ಇದು ಕತಾರ್ ಜನರು ಸಾಂಪ್ರದಾಯಿಕವಾಗಿ ಮುತ್ತುಗಳನ್ನು ಹುಡುಕಲು ಸಮುದ್ರದಲ್ಲಿ ಹಾರಲು ಬಳಸುತ್ತಿದ್ದ ಧೋ ಬೋಟ್ ಮಾದರಿಯಲ್ಲಿದೆಯಂತೆ. ಈ ವಿನ್ಯಾಸವನ್ನು ಕೊಂಚ ಬದಲಿಸಬೇಕೆನ್ನುವುದು ಕೆಲವು ಸಂಘಟನೆಗಳ ಆಗ್ರಹ.
ಮಹಿಳಾ ಅಂಗಕ್ಕೆ ಹೋಲಿಕೆ
ಮತ್ತೊಂದು ಸ್ಟೇಡಿಯಂನ ವಿವಾದವಂತೂ ಕೇಳುವುದೇ ಬೇಡ. ಕಾರಣ, ಇದರ ವಿನ್ಯಾಸ ಮಹಿಳೆಯ ಗುಪ್ತಾಂಗವನ್ನು ಹೊಂದುತ್ತದೆ ಎಂದು. ಇದರ ಬದಲಾವಣೆಗೆ ಆಗ್ರಹಿಸಿಯೂ ಧ್ವನಿಗಳು ಎದ್ದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com