ಬೇಕಂತ್ಲೆ ಬೀಳ್‌ತಾರೆ

ಬ್ರೆಜಿಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೆಕ್ಸಿಕೊ ವಿರುದ್ಧ ನಡೆದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ...
ಬೇಕಂತ್ಲೆ ಬೀಳ್‌ತಾರೆ

ಬ್ರೆಜಿಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೆಕ್ಸಿಕೊ ವಿರುದ್ಧ ನಡೆದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಗಿಟ್ಟಿಸಲೇಂದೇ ನಾನು ಬಿದ್ದೆ ಎಂದು ಹೇಳಿದ್ದ ಹಾಲೆಂಡ್‌ನ ಅರ್ಜೆನ್ ರಾಬೆನ್ ಫುಟ್ಬಾಲ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಫುಟ್ಬಾಲ್ ಇತಿಹಾಸ ಕೆದಕುತ್ತಾ ಹೊರಟರೆ, ಇಂತಹ ಹಲವಾರು ಘಟನೆಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ನೂರಾರು ಕೋಟಿ ಪಡೆಯುವ ವೀರರೇ ಪೆನಾಲ್ಟಿ ಗಿಟ್ಟಿಸಲು ಬೀಳುವ ಅಚ್ಚರಿಯ ಘಟನೆಗಳು ಅಭಿಮಾನಿಗಳ ನೆನಪಿನಿಂದ ಎಂದೂ ಮಾಸುವುದಿಲ್ಲ. ಪ್ರಮುಖ ಆಟಗಾರರು ಬಿದ್ದ ಘಟನೆಗಳನ್ನು ಮೆಲಕು ಹಾಕೋಣ.


ಬೆಜರ್ಗನ್ ಕ್ಲಿನ್ಸಮನ್


1990ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೇಕಂತಲೇ ಬಿದ್ದ ಜರ್ಮನಿಯ ಕ್ಲಿನ್ಸಮೆನ್ ಬೀಳುವ ಮೂಲಕ ಅರ್ಜೆಂಟೀನಾದ ಪೆಡ್ರೋ ಮೊಂಜಾನ್ ಅವರಿಗೆ ರೆಫರೀ ರೆಡ್ ಕಾರ್ಡ್ ನೀಡಿದ್ದರು. ಆಗ ಜರ್ಮನಿ 1-0 ಅಂತರದಿಂದ ವಿಶ್ವಕಪ್ ಗೆದ್ದುಕೊಂಡಿತ್ತು.


ಡ್ರೊಗ್ಬಾ ಕಳ್ಳನೋಟ


ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲೊಬ್ಬ ಎನಿಸಿರುವ ಡಿಡೀಯರ್ ಡ್ರೋಗ್ಬಾ ಸಹ ಈ ರೀತಿ ಬಿದ್ದಿರುವುದು ಫುಟ್ಬಾಲ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.ಚಲ್ಸೀ ತಂಡದ ಪರ ಆಡುತ್ತಿದ್ದಾಗ ಎದುರಾಳಿ ಆಟಗಾರ ಸಾಲ್ವಾಟೋರೆ ಎರೋನಿಕಾ ಟಚ್ ಮಾಡುವ ಮೊದಲೇ ಬಿದ್ದ ಡ್ರೋಗ್ಬಾ, ನಂತರ ರೆಫರೀ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಳ್ಳನೋಟ ಬೀರುತ್ತಿರುವುದು ಎಲ್ಲರಿಗೂ ಕಾಣುತ್ತಿತ್ತು.


ಗ್ಯಾರೆತ್ ಬೇಲ್


ವಿಶ್ವದ ಅತೀ ದುಬಾರಿ ಆಟಗಾರ ಎಂಬ ಖ್ಯಾತಿ ಪಡೆದಿರುವ ಗ್ಯಾರೆತ್ ಬೇಲ್, 85 ಮಿಲಿಯನ್ ಯೂರೋಗೆ ರಿಯಲ್ ಮ್ಯಾಡ್ರಿಡ್ ಕ್ಲಬ್‌ಗೆ ಮಾರಾಟವಾಗುವ ಮುನ್ನ ಇಂಗ್ಲೆಂಡ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವಾಗ ಬೇಕಂತಲೇ ಬಿದ್ದ ಬೇಲ್, ಪೆನಾಲ್ಟಿಗೆ ಮನವಿ ಮಾಡಿದ್ದರು. ಇದನ್ನು ಗಮನಿಸಿದ ರೆಫರಿ ಪೆನಾಲ್ಟಿ ನೀಡದೇ ಬೇಲ್‌ಗೆ ಹಳದಿ ಕಾರ್ಡ್ ತೋರಿಸಿದ್ದರು.ಅಲ್ಲದೆ, ಪ್ರಿಮಿಯರ್ ಲೀಗ್‌ನಲ್ಲಿ ಈ ರೀತಿ ಬೀಳುವ ಮೂಲಕ ಅತಿ ಹೆಚ್ಚು ಬಾರಿ ಹಳದಿ ಕಾರ್ಡ್ (7 ಬಾರಿ) ಪಡೆದ ಆಟಗಾರ ಎನಿಸಿದ್ದಾರೆ ಬೇಲ್.


ಸೆರ್ಜಿಯೋ ಬಸ್ಕೆಟ್


ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಪಂದ್ಯವೊಂದರಲ್ಲಿ ಇಂಟರ್ ಮಿಲಾನ್ ವಿರುದ್ಧ ಬಾರ್ಸಿಲೋನಾ ತಂಡದ ಪರ ಆಡುತ್ತಿದ್ದ ಸೆರ್ಜಿಯೋ ಬಸ್ಕೆಟ್ಸ್ ಅವರು ಬಿದ್ದ ಪರಿಯನ್ನು ನೋಡಿದರೆ, ಯಾರಿಗಾದರೂ ಅಚ್ಚರಿ ಕಾಡಲೇಬೇಕು. ರೆಫರೀ ವಂಚಿಸಲೆಂದೇ ಬಿದ್ದ ಸೆರ್ಜಿಯೋ ನಂತರ ರೆಫರೀ ಪ್ರತಿಕ್ರಿಯೆ ನೋಡಲು ಕಳ್ಳನೋಟ ಬೀರುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.


ರಿವಾಲ್ಡೊ


ಬ್ರೆಜಿಲ್ ಗೆದ್ದ 2002ನೇ ವಿಶ್ವಕಪ್ ಪಂದ್ಯಾವಳಿಯ ಲೀಗ್ ಹಂತದ 'ಸಿ' ಗುಂಪಿನ ಪಂದ್ಯದಲ್ಲಿ ಟರ್ಕಿ ವಿರುದ್ಧ ನಡೆಯುತ್ತಿದ್ದ ಪಂದ್ಯದಲ್ಲಿ ಟರ್ಕಿ ಆಟಗಾರ ಹಾಕನ್ ಅನ್ಸಾಲ್ ಅವರು ಒದ್ದ ಚೆಂಡು ಬ್ರೆಜಿಲ್‌ನ ರಿವಾಲ್ಡೋ ಕಾಲಿಗೆ ಬಂದು ಬಡಿಯಿತು. ಆಗ ರಿವಾಲ್ಡೋ ತಮ್ಮ ಮುಖ ಹಿಡಿದುಕೊಂಡು ಕೆಳಗೆ ಬಿದ್ದುಬಿಟ್ಟರು. ಇದನ್ನು ಗಮನಿಸಿದ ರೆಫರಿ ರಿಲ್ಡೋಗೆ ದಂಡ ಹಾಕಿದ್ದರು. ನಾನು ಮುಖ ಹಿಡಿದುಕೊಂಡು ಬಿದ್ದದ್ದು ನಿಜ. ಆದರೆ, ನನಗೆ ಚಂಡು ಬಡಿದಿದ್ದನ್ನು ಯಾರೂ ಗಮನಿಸಲಿಲ್ಲ ಎಂದು ನಂತರ ರಿವಾಲ್ಡೋ ಹೇಳಿಕೊಂಡಿದ್ದರು.



ಆ್ಯಶ್ಲೇ ಯಂಗ್


ಫುಟ್ಬಾಲ್‌ನಲ್ಲಿ ಆಟಗಾರನೊಬ್ಬ ಬೇಕಂತಲೇ ಬಿದ್ದಿದ್ದು ಗೊತ್ತಾಗುವುದು ನಾವು ವಿಡಿಯೋ ರಿಪ್ಲೇ ಮಾಡಿದಾಗಲೇ. ಮೆಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ ಆ್ಯಶ್ಲೆ ಯಂಗ್ ಅವರು ಸ್ಪೇನ್‌ನ ರಿಯಲ್ ಸೋಸಿಡಾಡ್ ಕ್ಲಬ್ ವಿರುದ್ಧ ನಡೆದ ಪಂದ್ಯದಲ್ಲಿ ಅಸ್ತಾನ್ ವಿಲ್ಲಾ ಟಚ್ ಮಾಡುವ ಮೊದಲೇ ಬಿದ್ದು ಪೆನಾಲ್ಟಿ ಗಿಟ್ಟಿಸಲು ಬಿದ್ದಿದ್ದರು. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಆದರೆ ತಮ್ಮ ತಪ್ಪಿನ ಕುರಿತು ಕ್ಷೆಮೆಯಾಚಿಸದ ಯಂಗ್ ಸೂಕ್ತ ಕ್ರಮಕೈಗೊಳ್ಳುವುದು ರೆಫ್ರೀಗಳಿಗೆ ಬಿಟ್ಟದ್ದು ಎಂಬ ಹೇಳಿಕೆ ನೀಡಿದ್ದರು.


ಗ್ಯಾರೆತ್ ಬೇಲ್

ಮೆಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದ ನಾನಿ ಎಂಬ ಆಟಗಾರ ಟೊಟನ್ಹಾಮ್ ವಿರುದ್ಧ ನಡೆದ ಪಂದ್ಯದಲ್ಲಿ ಎದುರಾಳಿ ಆಟಗಾರ ಬರೀ ಟಚ್ ಮಾಡಿದ್ದಕ್ಕೆ ಬಿದ್ದಿದ್ದನ್ನು ರೆಫರೀ ಅಲ್ಲ, ಪ್ರೇಕ್ಷಕರೇ ಗಮನಿಸಿದ್ದರು. ಅಲ್ಲದೆ, ನಾನಿ ಈ ರೀತಿ ಮಾಡಿದ್ದಕ್ಕೆ ಭಾರೀ ಪ್ರಮಾಣದ ಟೀಕೆಗಳು ಕೇಳಿಬಂದಿದ್ದವು. ಬೇಕಂತಲೇ ಬೀಳುವುದಕ್ಕಾಗಿ ಹೆಸರಾಗಿದ್ದ ಈತನ ಬಗ್ಗೆ ರೆಫರೀಗಳು ಹೆಚ್ಚಿನ ಜಾಗೃತಿ ವಹಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com