ಸುರಕ್ಷೆಗಾಗಿ ಗರ್ಭ ಪರೀಕ್ಷೆ ಮಾಡುವುದು ಅಗತ್ಯ: ಮೇರಿಕೋಮ್

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮುನ್ನ ಮಹಿಳಾ ಬಾಕ್ಸರ್‌ಗಳಿಗೆ ಗರ್ಭ ಪರೀಕ್ಷೆ ಮಾಡಬೇಕು ಎನ್ನುವ...
ಎಂಸಿ ಮೇರಿ ಕೋಮ್
ಎಂಸಿ ಮೇರಿ ಕೋಮ್

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮುನ್ನ ಮಹಿಳಾ ಬಾಕ್ಸರ್‌ಗಳಿಗೆ ಗರ್ಭ ಪರೀಕ್ಷೆ ಮಾಡಬೇಕು ಎನ್ನುವ ನಿಲುವಿಗೆ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಎಂಸಿ ಮೇರಿ ಕೋಮ್ ಸಹಮತ ಸೂಚಿಸಿದ್ದಾರೆ.

ದೊಡ್ಡ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸುವ ಮುನ್ನ ಗರ್ಭ ಪರೀಕ್ಷೆ ಕಡ್ಡಾಯವಾಗಿ ಮಾಡಿಸಲೇಬೇಕು. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮುನ್ನ ಇಂಥಾ ಪರೀಕ್ಷೆಗೆ ಒಳಗಾಗಿದ್ದೇವೆ. ಈ ಸಮಸ್ಯೆ ಹಿರಿಯರಿಗೆ ಅಥವಾ ಕಿರಿಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ನನ್ನ ಅಭಿಪ್ರಾಯವೇನೆಂದರೆ ರಿಂಗ್ ಒಳಗೆ ಪ್ರವೇಶಿಸುವ ಮುನ್ನ, ನಮ್ಮ ಮುಂದಿನ ಜನಾಂಗದ ಬಗ್ಗೆ ಕಾಳಜಿ ವಹಿಸುವುದೊಳಿತು.

ಕಳೆದ 2-3ವರ್ಷಗಳಲ್ಲಿ ಇಂಥಾ ಪರೀಕ್ಷೆಗಳನ್ನು ನಡೆಸುತ್ತಿರಲಿಲ್ಲ. ಇದು ನಮ್ಮ ಸುರಕ್ಷೆಗಾಗಿಯೇ ಮಾಡಲಾಗುತ್ತದೆ ಎಂಬುದು ನಮಗೆ ಗೊತ್ತು. ರಿಂಗ್‌ನಲ್ಲಿ ಭಾರತೀಯ ಅಥ್ಲೀಟ್‌ಗಳ ಬಗ್ಗೆ ಯಾವುದೇ ಕೆಟ್ಟ ಭಾವನೆ ಮೂಡಬಾರದು ಎಂದು ನಾನು ಬಯಸುತ್ತೇನೆ. ಆದ್ದರಿಂದ ಗರ್ಭ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿದೆ ಎಂದು ಮೇರಿಕೋಮ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com