ಸರಿತಾ ದೇವಿಗೆ ಅಜೀವ ನಿಷೇಧ ಹೇರಲು ಎಐಬಿಎ ಚಿಂತನೆ

ಲೈಶ್‌ರಾಂ ಸರಿತಾ ದೇವಿ(ಸಾಂದರ್ಭಿಕ ಚಿತ್ರ)
ಲೈಶ್‌ರಾಂ ಸರಿತಾ ದೇವಿ(ಸಾಂದರ್ಭಿಕ ಚಿತ್ರ)

ನವದೆಹಲಿ: ಏಷ್ಯನ್ ಗೇಮ್ಸ್ ಮಹಿಳಾ ಬಾಕ್ಸಿಂಗ್(60 ಕೆ.ಜಿ ಮಿಡಿಲ್ ವೆಯಿಟ್) ವಿಭಾಗದಲ್ಲಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ ಭಾರತದ ಬಾಕ್ಸಿಂಗ್ ಕ್ರೀಡಾಪಟು ಲೈಶ್‌ರಾಂ ಸರಿತಾ ದೇವಿಯನ್ನು ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಧೆ(ಎಐಬಿಎ) ಗರಿಷ್ಠ ಶಿಕ್ಷೆ ಅಥವಾ ಬ್ಯಾನ್ ಮಾಡುವ ಸಾಧ್ಯತೆ ಇದೆ.

ಸದ್ಯ ಎಐಬಿಎ ಸರಿತಾ ದೇವಿಯನ್ನು ತಾತ್ಕಾಲಿಕ ಅಮಾನತು ಮಾಡಿದ್ದು, ಅವರಿಗೆ  ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ ವು ಚಿಂಗ್-ಕುವೋ ಅವರು ಸುದ್ದಿ ಸಂಸ್ಥೆವೊಂದಕ್ಕೆ ತಿಳಿಸಿದ್ದಾರೆ.

ಕ್ರೀಡಾಪುಟಗಳು ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ. ಗೆಲುವನ್ನು ಸ್ವೀಕರಿಸುವವರು ಸೋಲನ್ನು ಸಹ ಮನಪೂರ್ವಕವಾಗಿ ಸ್ವೀಕರಿಸಬೇಕಾಗುತ್ತದೆ. ಅದನ್ನು ಬಿಟ್ಟು ಅನುಚಿತವಾಗಿ ವರ್ತಿಸಿದರೆ ಕ್ರೀಡಾ ಸ್ಫೂರ್ತಿ ಎಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಸರಿತಾ ಏಷ್ಯನ್‌ ಕ್ರೀಡಾಕೂಟದ ಬಾಕ್ಸಿಂಗ್‌ನ ಮಹಿಳೆಯರ 60 ಕೆ.ಜಿ. ಲೈಟ್‌ವೇಟ್‌ ವಿಭಾಗದ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯದ ಜಿ ನಾ ಪಾರ್ಕ್‌ ಕೈಯಲ್ಲಿ ಸೋಲು ಅನುಭವಿಸಿ ಕಂಚಿನ ಪದಕ ಪಡೆದಿದ್ದರು. ‘ರೆಫರಿಗಳ ತಪ್ಪು ನಿರ್ಣಯಗಳಿಂದ ನನಗೆ ಸೋಲಾಗಿದೆ’ ಎಂದು ಸರಿತಾ ದೂರಿದ್ದರು. ಅಷ್ಟು ಮಾತ್ರವಲ್ಲದೆ. ಪದಕ ಪ್ರದಾನ ಸಮಾರಂಭದಲ್ಲಿ ಕಂಚಿನ ಪದಕವನ್ನು ತಿರಸ್ಕರಿಸಿದ್ದರಲ್ಲದೆ, ಅದನ್ನು ಜಿ ನಾ ಪಾರ್ಕ್‌ ಅವರ ಕೊರಳಿಗೆ ಹಾಕಿ ಅಳುತ್ತಾ ಹೊರ ನಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com