
ಸೋಚಿ: ರಷಿಯಾದಲ್ಲಿ ನಡೆಯುತ್ತಿರುವ ಚೆಸ್ ವಿಶ್ವ ಚಾಂಪಿಯನ್ ೧೨ ಪಂದ್ಯಗಳ ಸರಣಿಯ ಏಳನೇ ಪಂದ್ಯ ಡ್ರಾ ನಲ್ಲಿ ಮುಕ್ತಾಯವಾಗಿ ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲಸನ್, ಭಾರತೀಯ ಚೆಸ್ ಪ್ರತಿಭೆ ಮಾಜಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ ಅವರ ವಿರುದ್ಧ ೪-೩ ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆರು ವರೆ ಘಂಟೆಗಳ ಕಾಲ ನಡೆದ ಈ ಸುದೀರ್ಘ ಸಮಯದ ಚೆಸ್ ಪಂದ್ಯ ೧೨೨ ನಡೆಗಳ ನಂತರ ಡ್ರಾನಲ್ಲಿ ಕೊನೆಗೊಂಡಿತು. ಇದು ಚೆಸ್ ಪಂದ್ಯದ ಅತ್ಯುತ್ತಮ ಟ್ಯಾಕ್ಟಿಕಲ್ ಪಂದ್ಯ ಎಂದು ಬಣ್ಣಿಸಲಾಗಿದೆ. ಇಲ್ಲಿಯವರೆಗೂ ದಾಖಲೆಯಾಗಿರುವ ಸುದೀರ್ಘ ಚೆಸ್ ಪಂದ್ಯಕ್ಕೂ ಎರಡು ಕಡಿಮೆ ನಡೆಗಳೊಂದಿಗೆ ಈ ಪಂದ್ಯ ಮುಕ್ತಾಯವಾಗಿದೆ. ಮೊದಮೊದಲು ಆನಂದ್ ಅವರು ಕೆಲವು ತಪ್ಪು ನಡೆಗಳ ನಂತರ ಎಚ್ಚೆತ್ತುಕೊಂಡು ರಕ್ಷಣಾತ್ಮಕವಾಗಿ ಆಡಿದರು ಎಂದು ತಿಳಿದು ಬಂದಿದೆ.
Advertisement