ಟ್ವೀಟರ್‌ನಲ್ಲಿ #putoutyourbats ಮೂಲಕ ಹ್ಯೂಸ್‌ಗೆ ಶ್ರದ್ಧಾಂಜಲಿ

ಚೆಂಡು ತಲೆಗೆ ಬಡಿದ ಕಾರಣದಿಂದಾಗಿ ಬುಧವಾರ ತಡರಾತ್ರಿ ಸಾವನ್ನಪ್ಪಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್‌ಗೆ ...
ಟ್ವೀಟರ್‌ನಲ್ಲಿ ಫಿಲಿಪ್ ಹ್ಯೂಸ್‌ಗೆ ಶ್ರದ್ಧಾಂಜಲಿ
ಟ್ವೀಟರ್‌ನಲ್ಲಿ ಫಿಲಿಪ್ ಹ್ಯೂಸ್‌ಗೆ ಶ್ರದ್ಧಾಂಜಲಿ
Updated on
ಸಿಡ್ನಿ: ಚೆಂಡು ತಲೆಗೆ ಬಡಿದ ಕಾರಣದಿಂದಾಗಿ ಬುಧವಾರ ತಡರಾತ್ರಿ ಸಾವನ್ನಪ್ಪಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್‌ಗೆ ಸಾಮಾಜಿಕ ತಾಣದಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಕ್ರಿಕೆಟಿಗರು ಮತ್ತು ಕ್ರಿಕೆಟ್ ಆರಾಧಕರು ಶುಕ್ರವಾರ ಟ್ವೀಟರ್‌ನಲ್ಲಿ ಕ್ರಿಕೆಟ್ ಬ್ಯಾಟ್‌ಗಳನ್ನು ಹೊರಗಿಟ್ಟು ಅದರ ಫೋಟೋ ಹಾಕಿ #putoutyourbats ಎಂಬ ಹ್ಯಾಶ್‌ಟ್ಯಾಗ್ ಬಳಸಿ ಹ್ಯೂಸ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸೌಥ್  ಆಸ್ಟ್ರೇಲಿಯಾ ಹಾಗೂ ನ್ಯೂ ಸೌಥ್ ವೇಲ್ಸ್ ತಂಡಗಳ ನಡುವೆ ಮಂಗಳವಾರ ನಡೆದಿದ್ದ ಪ್ರಥಮ ದರ್ಜೆ ಪಂದ್ಯದಲ್ಲಿ ಸೀನ್ ಅಬೋಟ್ ಎಸೆದ ಬೌನ್ಸರ್ ಹ್ಯೂಸ್ ತಲೆಗೆ ಬಡಿದು ತೀವ್ರ ಗಾಯವಾಗಿತ್ತು. ಕ್ರಿಕೆಟ್ ಮೈದಾನದಲ್ಲೇ ಕುಸಿದು ಬಿದ್ದ ಹ್ಯೂಸ್‌ನ್ನು ಸೇಂಟ್ ವಿನ್ಸೆಂಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಹ್ಯೂಸ್ ಬುಧವಾರ ತಡರಾತ್ರಿ ಸಾವನ್ನಪ್ಪಿದ್ದರು.
ಗುರುವಾರ ಹ್ಯೂಸ್ ನಿಧನ ಸುದ್ದಿ ಪ್ರಕಟವಾಗುತ್ತಿದ್ದಂತೆ ಕ್ರಿಕೆಟ್ ಲೋಕ ದಿಗ್ಬ್ರಮೆಗೊಳಗಾಗಿತ್ತು.  ಈ ನಡುವೆ 25ರ ಹರೆಯದ ಈ ಉದಯೋನ್ಮುಖ ಆಟಗಾರನ ನಿಧನಕ್ಕೆ ಸಾಮಾಜಿಕ ತಾಣಗಳಲ್ಲಿ ಹ್ಯಾಶ್‌ಟ್ಯಾಗ್ ಬಳಸಿ ಆರಾಧಕರು ಸಂತಾಪ ವ್ಯಕ್ತ ಪಡಿಸಿದ್ದು ವಿಶೇಷವಾಗಿತ್ತು.
ಭಾರತೀಯ ಕ್ರಿಕೆಟರ್ ಅಜಿಂಕ್ಯ ರೆಹಾನೆ ಬ್ಯಾಟ್ ಮೇಲೆ ಇಂಡಿಯನ್ ಕ್ಯಾಪ್ ಇರಿಸಿದ ಫೋಟೋವನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿ "RIP Phil Hughes #PutOutYourBat #CricketFamily."  ಎಂದು ಟ್ವೀಟಿಸಿದ್ದಾರೆ.
ಅದೇ ವೇಳೆ ಸುರೇಶ್ ರೈನಾ ಕೂಡಾ ಇದೇ ರೀತಿಯ ಫೋಟೋ ಶೇರ್ ಮಾಡಿ "Rip Phil Hughes #63notoutforever." ಎಂದು ಬರೆದಿದ್ದಾರೆ. 
ಇತ್ತ ಗೂಗಲ್ ಆಸ್ಟ್ರೇಲಿಯಾದ ಹೋಮ್‌ಪೇಜ್‌ನಲ್ಲಿಯೂ ಬ್ಯಾಟ್‌ನ ಫೋಟೋ ಹಾಕಲಾಗಿತ್ತು.
 ಹ್ಯೂಸ್ ನಿಧನಕ್ಕೆ ಸಂತಾಪ ಸೂಚಿಸಿದ ಐಸಿಸಿ,  ಟ್ವೀಟರ್‌ನಲ್ಲಿ  ಫಿಲಿಪ್ ಹ್ಯೂಸ್ ನಿಧನಕ್ಕೆ ಕ್ರಿಕೆಟ್ ಲೋಕ ಸಂತಾಪ ಸೂಚಿಸುತ್ತಿದೆ. ಈಗ ಎಲ್ಲರೂ ಬ್ಯಾಟ್ ಕೆಳಗಿಡುವ ಸಮಯ #putoutyourbats ಎಂದು ಹೇಳಿದೆ.
ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್, ಇಂಗ್ಲೆಂಡ್‌ನ ಜೋನಾಥನ್ ಟ್ರಾಟ್, ಸ್ಟೀವ್ ಸ್ಮಿತ್, ವೆಸ್ಟ್ ಇಂಡೀಸ್‌ನ  ವಿವ್  ರಿಚಾರ್ಡ್ಸ್, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾಗನ್ ಮೊದಲಾದವರು ಟ್ವೀಟ್ ಮೂಲಕ ಹ್ಯೂಸ್ ಅಗಲಿಕೆಗೆ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಕ್ರಿಕೆಟ್ ಸೌಥ್ ಆಫ್ರಿಕಾ  #PutOutYourBats #PhillipHughes408 #63NotOut #RIP." 
 ಎಂದು ಟ್ವೀಟ್ ಮಾಡಿದೆ.
ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನದೊಂದಿಗೆ 3ನೇ ಪಂದ್ಯವನ್ನಾಡುವ ಮುನ್ನ ಡೆಸ್ಸಿಂಗ್ ರೂಮ್‌ನ ಹೊರಗೆ ಬ್ಯಾಟ್ ಮತ್ತು ಅವರ ಕ್ಯಾಪ್‌ಗಳನ್ನಿರಿಸಿ #PutOutYourBats  ಅಭಿಯಾನದಲ್ಲಿ ಪಾಲ್ಗೊಂಡಿತು.

ಏತನ್ಮಧ್ಯೆ, ಭಾರತದ ಹಾಕಿ ಆಟಗಾರ ರೂಪಿಂದರ್ ಪಾಲ್  ಸಿಂಗ್ ಹಾಕಿ ಸ್ಟಿಕ್‌ಗಳನ್ನು ಹೊರಗಿಟ್ಟಿರುವ ಫೋಟೋ ಹಾಕಿ, "Phil Hughes, you will always be remembered. #PutOurYourBats #PutOutYourSticks #IndianMensHockeyTeam." ಎಂದು ಟ್ಟೀಟಿಸಿ ಭಾರತೀಯ ಹಾಕಿ ತಂಡದ ಪರವಾಗಿ  ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಟ್ವೀಟರ್‌ನಲ್ಲಿ ಸಿಡ್ನಿಯ ಪೌಲ್ ಡಿ ಟೈಲರ್ ಎಂಬ ಕ್ರಿಕೆಟ್ ಆರಾಧಕನೊಬ್ಬ #PutOurYourBats  ಎಂಬ ಈ ಅಭಿಯಾನವನ್ನು ಆರಂಭಿಸಿದ್ದು ಇದಕ್ಕೆ ಲಭಿಸಿದ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com