ನಾಳೆಯಿಂದ ಐಪಿಎಲ್ ಸಮರ ಶುರು

ಮತ್ತೊಮ್ಮೆ ಹೊಸ ಕನಸು ಹೊತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ಆಟಗಾರರು ಹೊಸ ಸವಾಲಿಗೆ ಮೈಯೊಡ್ಡಿ ನಿಂತಿದ್ದಾರೆ. ಈವರೆಗೆ ನಡೆದಿರುವ 7 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಯಲ್ಲಿ...
ನಾಳೆಯಿಂದ ಐಪಿಎಲ್  ಸಮರ ಶುರು
ನಾಳೆಯಿಂದ ಐಪಿಎಲ್ ಸಮರ ಶುರು

ಮತ್ತೊಮ್ಮೆ ಹೊಸ ಕನಸು ಹೊತ್ತು ರಾಯಲ್ ಚಾಲೆಂಜರ್ಸ್  ಬೆಂಗಳೂರು (ಆರ್‍ಸಿಬಿ) ಆಟಗಾರರು ಹೊಸ ಸವಾಲಿಗೆ ಮೈಯೊಡ್ಡಿ ನಿಂತಿದ್ದಾರೆ. ಈವರೆಗೆ ನಡೆದಿರುವ 7 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಯಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲಲಾಗದ ರಾಯಲ್ ಚಾಲೆಂಜರ್ಸ್ ಹುಡುಗರಿಗೆ, ಈಗ 8ನೇ ಆವೃತ್ತಿಯಲ್ಲಾದರೂ ಕನಸು ಈಡೇರುವುದೇ.... ಹೀಗೊಂದು ಪ್ರಶ್ನೆ ಎಳ್ಲರ ಮನಸ್ಸಲ್ಲೂ ಇದೆ.

ಕೋಲ್ಕತಾದ ಪ್ರತಿಷ್ಠಿತ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಮಂಗಳವಾರ 8ನೇ ಐಪಿಎಲ್ ಟೂರ್ನಿಗೆ ವರ್ಣಮಯ ಉದ್ಘಾಟನೆಯೊಂದಿಗೆ ಚಾಲನೆ ದೊರೆಯಲಿದೆ. ಮರುದಿನ ಬುಧವಾರದಂದು ಮೊದಲ ಪಂದ್ಯ ನಡೆಯಲಿದೆ.

ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಈಡನ್ ಗಾರ್ಡನ್ ನಲ್ಲಿ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗುವುದರೊಂದಿಗೆ ಸಮರ ಶುರುವಾಗಲಿದೆ.

ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ  ಈ ಬಾರಿಯ ಅಖಾಡದಲ್ಲಿ ನಿಂತಿದೆ. ಐಪಿಎಲ್ ಇತಿಹಾಸದಲ್ಲಿ ಆರ್ ಸಿಬಿ ನತದೃಷ್ಟ ತಂಡ ಎಂತಲೂ ಹೇಳಬಹುದು. ಸಶಕ್ತ ಆಟಗಾರರ ಸಮೂಹ ಇದ್ದರೂ, ಈ ವರೆಗೆ ಪ್ರಶಸ್ತಿ ಮರೀಚಿಕೆಯಾಗಿಯೇ ಇರುವುದು ಅಚ್ಚರಿ ಎನಿಸುತ್ತದೆ. ಕಳೆದು ಹೋದ 7 ಆವೃತ್ತಿಗಳಲ್ಲಿ ಎರಡು ಬಾರಿ ಫೈನಲ್ ಹಾಗೂ ಒಮ್ಮೆ ಸೆಮಿಫೈನಲ್ ಹಂತದವರೆಗೆ ಪ್ರವೇಶಿಸಿದ್ದರೂ ಪ್ರಶಸ್ತಿ ಗೆಲ್ಲಲಾಗದ ಕೊರತೆ ಕೇವಲ ಆ ತಂಡದ ಆಟಗಾರರನ್ನು ಅಷ್ಟೇ ಎಲ್ಲ ಇಡೀ ಐಪಿಎಲ್ ವಲಯಕ್ಕೆ ಅಚ್ಚರಿ ಮೂಡುವಂತೆ ಮಾಡಿದೆ.

ಆರ್‍ಸಿಬಿ ತಂಡದ ಪ್ರಮುಖರು ದೇಶೀಯರು
ವಿರಾಟ್ ಕೊಹ್ಲಿ (ನಾಯಕ), ವರುಣ್ ಅರುಣ್, ಅಬು ನೇಚಿಮ್, ಮನ್ವಿಂದರ್ ಬಿಸ್ಲಾ, ಇಕ್ಬಾಲ್ ಅಬ್ದುಲ್ಲಾ, ದಿನೇಶ್ ಕಾರ್ತಿಕ್, ಮಂದೀಪ್ ಸಿಂಗ್, ಹರ್ಷಲ್ ಪಟೇಲ್, ಜಲಜ ಸಕ್ಸೇನಾ, ಯೋಗೇಶ್ ತಕವಾಲೆ, ವಿಜಯ್ ಜೋಲ್.

ವಿದೇಶೀಯರು
ಕ್ರಿಸ್ ಗೇಯ್ಲ್ (ವೆಸ್ಟ್ ಇಂಡೀಸ್), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಸೀನ್ ಅಬ್ಬಾಟ್ (ಆಸ್ಟ್ರೇಲಿಯಾ), ನಿಕ್ ಮ್ಯಾಡಿನ್ಸನ್ (ಆಸ್ಟ್ರೇಲಿಯಾ), ಆ್ಯಡಂ ಮಿಲ್ನೆ (ನ್ಯೂಜಿಲೆಂಡ್), ರೀಲೀ ರೋಸ್ಸೋ (ದಕ್ಷಿಣ ಆಫ್ರಿಕಾ), ಡಾರೆನ್ ಸಾಮಿ (ವೆಸ್ಟ್ ಇಂಡೀಸ್), ಡೇವಿಡ್ ವೀಸೆ (ದಕ್ಷಿಣ ಆಫ್ರಿಕಾ).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com