ವಿಶ್ವ ಚಾಂಪಿಯನ್‍ಶಿಪ್‍ಗೆ ಬೋಲ್ಟ್ ಸಿದ್ಧ

ವಿಶ್ವದ ವೇಗದ ಓಟಗಾರ ಎಂಬ ಖ್ಯಾತಿಗೆಪಾತ್ರರಾಗಿರುವ ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಮುಂಬರುವ ವಿಶ್ವ ಚಾಂಪಿಯನ್‍ಶಿಪ್‍ಗೆ ಸಕಲ ಸಿದ್ಥತೆ ನಡೆಸಿದ್ದಾರೆ.
ಉಸೇನೆ ಬೋಲ್ಟ್
ಉಸೇನೆ ಬೋಲ್ಟ್

ಜಮೈಕಾ: ವಿಶ್ವದ ವೇಗದ ಓಟಗಾರ ಎಂಬ ಖ್ಯಾತಿಗೆಪಾತ್ರರಾಗಿರುವ ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಮುಂಬರುವ ವಿಶ್ವ ಚಾಂಪಿಯನ್‍ಶಿಪ್‍ಗೆ ಸಕಲ ಸಿದ್ಥತೆ  ನಡೆಸಿದ್ದಾರೆ.

ಇದೇ ವರ್ಷ ಆಗಸ್ಟ್‍ನಲ್ಲಿ ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಉಸೇನ್ ಬೋಲ್ಟ್, ಅಮೆರಿಕದ ಸ್ಟ್ರಿಂಟರ್ ಜಸ್ಟಿನ್ ಗ್ಯಾಟ್ಲಿನ್ ಅವರಿಂದ ತೀವ್ರ ಪೈಪೋಟಿ ಎದುರಿಸುವ ನಿರೀಕ್ಷೆ ಇದೆ. ಗ್ಯಾಟ್ಲಿನ್ ಕಳೆದ ವರ್ಷ ನಡೆದ ಡೈಮಂಡ್ ಲೀಗ್ ನಲ್ಲಿ 100 ಮೀ. ಮತ್ತು 200 ಮೀ. ವಿಭಾಗದಲ್ಲಿ ಕ್ರಮವಾಗಿ 9.77 ಸೆ. ಮತ್ತು 19.68ಸೆ.ಗಳ ಸಾಧನೆಯೊಂದಿಗೆ ಗಮನಾರ್ಹ ಪ್ರದರ್ಶನ ನೀಡಿದ್ದರು.

ಬೋಲ್ಟ್ ಅವರ ಕೋಚ್ ಆಗಿರುವ ಗ್ಲೆನ್ ಮಿಲ್ಸ್, ಕಿಂಗ್ಸ್ ಸ್ಟನ್ ನಲ್ಲಿ ಜಮೈಕಾದ ಸ್ಟ್ರಿಂಟರ್ ಮಾರ್ಚ್ ನಲ್ಲಿ ಅಭ್ಯಾಸ ನಡೆಸಿದ್ದು, 400 ಮೀ. ದೂರವನ್ನು 46.37ಸೆ.ಗಳಲ್ಲಿ ತಲುಪಿದ್ದರು. ಬೋಲ್ಟ್ ಕಳೆದ ಬಾರಿಗಿಂತ ಈ ಬಾರಿ ಉತ್ತಮ ನಿಯಂತ್ರಣದಲ್ಲಿದ್ದಾರೆ.

ಪ್ರತಿಯೋಬ್ಬ ಎದುರಾಳಿಯನ್ನು ಗಂಭೀರವಾಗಿಯೇ ಪರಿಗಣಿಸಬೇಕು. ಆದರೆ ಉಸೇನ್ ಬೋಲ್ಟ್ ಅತ್ಯುತ್ತಮ ಲಯದಲ್ಲಿರುವುದರಿಂದ ಹೆಚ್ಚು ಚಿಂತಿಸುವಂತಿಲ್ಲ ಎಂದು ಮಿಲ್ಸ್ ತಿಳಿಸಿದ್ದಾರೆ. ಕಳೆದ ವರ್ಷ ಕೇವಲ ಮೂರು ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಿದ್ದ 28 ವರ್ಷದ ಉಸೇನ್ ಬೋಲ್ಟ್, ಮುಂದಿನ ವರ್ಷ ಏ.19ರಂದು ರಿಯೊನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ 100 ಮೀ. ಓಟದಲ್ಲಿ ಭಾಗವಹಿಸಲಿದ್ದಾರೆ.

ಈ ಋತುವಿನಲ್ಲಿ ಅತಿ ಹೆಚ್ಚು ವೇಗವಾಗಿ ಓಡಬೇಕೆಂಬ ಆಸೆ ಹೊಂದಿದ್ದೇನೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ. ಸದ್ಯದ ಅಭ್ಯಾಸದಿಂದ ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ. ಮುಂಬರುವ ಒಲಿಂಪಿಕ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ನಡೆಸುತ್ತಿದ್ದೇನೆ ಎಂದು ಬೋಲ್ಟ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com