
ಪುಣೆ : ಐಪಿಎಲ್ ಟೂರ್ನಿಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹೊಸದೇನಲ್ಲ. ಈ ಹಿಂದಿನ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರರು ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದು, ಇದೀಗ ಅದೇ ತಂಡದ ಆಟಗಾರರೊಬ್ಬರಿಗೆ ಮ್ಯಾಚ್ ಫಿಕ್ಸಿಂಗ್ ಮಾಡಲು ಭಾರಿ ಮೊತ್ತದ ಆಮಿಷ ಒಡ್ಡಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗಗೊಂಡಿದೆ.
ಐಪಿಎಲ್ 8ನೇ ಆವೃತಿಯ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಜತೆ ಆಡಲಿದೆ. ಇದರ ಬೆನ್ನಲ್ಲೇ, ಮ್ಯಾಚ್ ಫಿಕ್ಸಿಂಗ್ ಸುದ್ದಿ ಹೊರಬಿದ್ದಿದೆ.
ಸದ್ಯ ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿರುವ ಈ ಆಟಗಾರನಿಗೆ, ಅವರ ಜತೆ ಹಿಂದೆ ರಣಜಿ ತಂಡದಲ್ಲಿ ಆಡುತ್ತಿದ್ದ ಸಹ ಆಟಗಾರನೊಬ್ಬನ ಮೂಲಕ ಹಣದ ಆಮಿಷ ಒಡ್ಡಲಾಗಿದೆ. ಆದರೆ, ಆಟಗಾರ ಈ ಆಮಿಷವನ್ನು ತಿರಸ್ಕರಿಸಿದ್ದು, ಕೂಡಲೇ ತಂಡದ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದಾರೆ. ಐಪಿಎಲ್ ಭ್ರಷ್ಟಾಚಾರ ತಡೆ ಮತ್ತು ಭದ್ರತಾ ಘಟಕ (ಎಸಿಎಸ್‌ಯು) ಈಗ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಬಿಸಿಸಿಐ ಅಧಿಕಾರಿಗಳು ಈ ವಿಷಯವನ್ನು ಖಚಿತಪಡಿಸಿದ್ದಾರೆ.
Advertisement