
ಬೆಂಗಳೂರು: ಜಗತ್ತಿನ ಖ್ಯಾತ ಕ್ರಿಕೆಟ್ ಕ್ರೀಡಾಂಗಣಗಳಲ್ಲೊಂದಾದ ಚಿನ್ನಸ್ವಾಮಿ ಕ್ರೀಡಾಂಗಣದ ಹಿರಿಮೆಗೆ ಈಗ ಮತ್ತೊಂದು ಗರಿ ಸಂದಿದೆ. ವಿಶ್ವದ ಮೊಟ್ಟಮೊದಲ `ಸೌರ ಇಂಧನ ವ್ಯವಸ್ಥೆ'ಯನ್ನು ಅಳವಡಿಸಿಕೊಂಡ ಖ್ಯಾತಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಪಾತ್ರವಾಗಿದೆ. ಅಲ್ಲದೆ `ಮೇಲ್ಛಾವಣಿ ವಿದ್ಯುತ್ ಘಟಕ'ವನ್ನು ಹೊಂದಿದ ಮೊಟ್ಟ ಮೊದಲ ಕ್ರೀಡಾಂಗಣವಾಗಿಯೂ ಚಿನ್ನಸ್ವಾಮಿ ಹೊರಹೊಮ್ಮಿದೆ.
ಬೆಂಗಳೂರಿನ ರೆನ್‍ಎಕ್ಸ್‍ಎಕೋಟೆಕ್ ಎಂಬ ಸಂಸ್ಥೆ ವತಿಯಿಂದ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ ಸೌರಫಲಕಗಳನ್ನು ಅಳವಡಿಸಲಾಗಿದೆ. ಈ ಫಲಕಗಳ ಮೂಲಕ 400 ಕಿ.ವ್ಯಾಟ್‍ಗಳಷ್ಟು ವಿದ್ಯುತ್ತನ್ನು ಉತ್ಪಾದಿಸಬಹುದಾಗಿದೆ.
ಈ ಫಲಕಗಳ ಸಹಾಯದಿಂದ ವಾರ್ಷಿಕವಾಗಿ 5.90 ಲಕ್ಷ ಯೂನಿಟ್ ವಿದ್ಯುತ್ತನ್ನು ಕ್ರೀಡಾಂಗಣ ಪಡೆಯಲಿದೆ. ಉತ್ಪಾದನಾ ವೆಚ್ಚವೂ ಕಡಿಮೆಯಾಗಿದ್ದು, ಪ್ರತಿ ಯೂನಿಟ್ ಗೆ ರು. 9.56 ಖರ್ಚು ಬೀಳುತ್ತದೆ ಎಂದು ಕೆಎಸ್‍ಸಿಎ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
Advertisement