ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಅಪೂರ್ವಿ

ಭಾರತದ ಮಹಿಳಾ ಶೂಟರ್‌ ಅಪೂರ್ವಿ ಚಾಂದೇಲಾ ಅವರು ಮುಂದಿನ ವರ್ಷ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.
ಭಾರತದ ಮಹಿಳಾ ಶೂಟರ್‌ ಅಪೂರ್ವಿ ಚಾಂದೇಲಾ
ಭಾರತದ ಮಹಿಳಾ ಶೂಟರ್‌ ಅಪೂರ್ವಿ ಚಾಂದೇಲಾ

ನವದೆಹಲಿ: ಭಾರತದ ಮಹಿಳಾ ಶೂಟರ್‌ ಅಪೂರ್ವಿ ಚಾಂದೇಲಾ ಅವರು ಮುಂದಿನ ವರ್ಷ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.

ಕೊರಿಯಾದ ಚಾಂಗವನ್‌ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್‌ನಲ್ಲಿ 10 ಮೀಟರ್ ಏರ್‌ ರೈಫೆಲ್‌ ವಿಭಾಗದಲ್ಲಿ ಕಂಚಿನ ಸಾಧನೆ ತೋರಿದರು. ಈ ಮೂಲಕ 2016ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಟೂರ್ನಿಯಲ್ಲಿ ಕೊನೆಯ ಸುತ್ತಿಗೆ ಎಂಟು ಜನರ ಪಟ್ಟಿಯಲ್ಲಿ ಐದನೇಯವರಾಗಿ ಅರ್ಹತೆ ಪಡೆದ ಅಪೂರ್ವಿ ಅವರು, 185.6 ಪಾಯಿಂಟ್‌ಗಳನ್ನು ಕಲೆಹಾಕಿ ಮೂರನೇ ಸ್ಥಾನ ಪಡೆದರು. ಈ ಎಂಟರ ಪೈಕಿ ಮೊದಲ ಆರು ಸ್ಥಾನ ಪಡೆದವರಿಗೆ ರಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ದೊರೆಯುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com