ಲಿಯಾಮ್ ಲಿವಿಂಗ್‌ಸ್ಟೋನ್ (  ಕೃಪೆ : ಟ್ವಿಟ್ಟರ್)
ಲಿಯಾಮ್ ಲಿವಿಂಗ್‌ಸ್ಟೋನ್ ( ಕೃಪೆ : ಟ್ವಿಟ್ಟರ್)

ಕ್ಲಬ್ ಮ್ಯಾಚ್‌ನಲ್ಲಿ ವೈಯಕ್ತಿಕ 350 ರನ್ ಬಾರಿಸಿ ದಾಖಲೆ ಬರೆದ ಕ್ರಿಕೆಟಿಗ!

ಇಲ್ಲಿ ಭಾನುವಾರ ನಡೆದ ನ್ಯಾಷನಲ್ ಕ್ಲಬ್ ಚಾಂಪಿಯನ್‌ಶಿಪ್ ಕ್ರಿಕೆಟ್ ಪಂದ್ಯಾಟದಲ್ಲಿ 21ರ ಹರೆಯದ ಇಂಗ್ಲೆಂಡ್‌ನ ಕ್ರಿಕೆಟಿಗ ಲಿಯಾಮ್....

ಲಂಡನ್: ಇಲ್ಲಿ ಭಾನುವಾರ ನಡೆದ ನ್ಯಾಷನಲ್ ಕ್ಲಬ್ ಚಾಂಪಿಯನ್‌ಶಿಪ್ ಕ್ರಿಕೆಟ್ ಪಂದ್ಯಾಟದಲ್ಲಿ  21ರ ಹರೆಯದ ಇಂಗ್ಲೆಂಡ್‌ನ ಕ್ರಿಕೆಟಿಗ ಲಿಯಾಮ್ ಲಿವಿಂಗ್‌ಸ್ಟೋನ್ 350 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.

ಲಿವಿಂಗ್ ಸ್ಟೋನ್ ಅವರು 138 ಎಸೆತಗಳಲ್ಲಿ 34 ಬೌಂಡರಿ ಮತ್ತು 27 ಸಿಕ್ಸರ್ ಬಾರಿಸಿ 350 ರನ್ ದಾಖಲಿಸಿದ್ದರು.

ಕಾಲ್ಡಿ ಮತ್ತು ನಾನ್‌ವಿಚ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಲಿವಿಂಗ್ ಸ್ಟೋನ್ ಬಾರಿಸಿದ 250 ರನ್ ಸಹಾಯದಿಂದ ನಾನ್‌ವಿಚ್ ತಂಡ 579 ರನ್ ದಾಖಲಿಸುವಂತಾಯಿತು.  45 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ನಾನ್‌ವಿಚ್ ತಂಡ ಈ ಮೊತ್ತ ಪೇರಿಸಿತ್ತು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕಾಲ್ಡಿ ತಂಡಕ್ಕೆ ಕೇವಲ 79 ರನ್ ಗಳನ್ನಷ್ಟೇ ದಾಖಲಿಸಲು ಸಾಧ್ಯವಾಯಿತು. 79 ರನ್ ಬಾರಿಸಿ ಕಾಲ್ಡಿ ಕಂಡ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ನಾನ್‌ವಿಚ್ 500 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು.

ಅದೀಗ ಏಕದಿನ ಪಂದ್ಯದಲ್ಲಿ ವೈಯಕ್ತಿಕ ಅತೀ ಹೆಚ್ಚು ರನ್ ಗಳಿಸಿದ  ದಾಖಲೆ ಲಿವಿಂಗ್ ಸ್ಟೋನ್‌ನ  ಪಾಲಾಗಿದೆ. ಈ ಹಿಂದೆ 2008ರಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ಶಾಲಾ ಕ್ರಿಕೆಟ್ ಪಂದ್ಯಾಟದಲ್ಲಿ  15ರ ಹರೆಯದ ನಿಖಿಲೇಶ್ ಸುರೇಂದ್ರನ್ ಅಜೇಯ 334 ರನ್ ಬಾರಿಸಿ ದಾಖಲೆ ಬರೆದಿದ್ದರು.

Related Stories

No stories found.

Advertisement

X
Kannada Prabha
www.kannadaprabha.com