ಶ್ರೀನಾಥ್ ಅರವಿಂದ್
ಶ್ರೀನಾಥ್ ಅರವಿಂದ್

ಮಿಲ್ನೆ ಬದಲಿಗೆ ಆರ್‍ಸಿಬಿಗೆ ಶ್ರೀನಾಥ್ ಅರವಿಂದ್

ಗಾಯದ ಸಮಸ್ಯೆಯಿಂದ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಲಭ್ಯರಾಗಿದ್ದ ನ್ಯೂಜಿಲೆಂಡ್‍ನ ವೇಗಿ...
Published on

ನವದೆಹಲಿ: ಗಾಯದ ಸಮಸ್ಯೆಯಿಂದ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಲಭ್ಯರಾಗಿದ್ದ ನ್ಯೂಜಿಲೆಂಡ್‍ನ ವೇಗಿ ಆ್ಯಡಂ ಮಿಲ್ನೆ ಅವರ ಬದಲಿಗೆ ಕರ್ನಾಟಕದ ಎಡಗೈ ಬೌಲರ್ ಶ್ರೀನಾಥ್ ಅರವಿಂದ್ ಆರ್‍ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕಳೆದ ತಿಂಗಳು ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿ ವೇಳೆ ಮಿಲ್ನೆ ಕಾಲಿನ ಗಾಯದ ಸಮಸ್ಯೆಗೆ ಸಿಲುಕಿದ್ದರು. ಅವರು ಐಪಿಎಲ್‍ನಿಂದ ಹೊರಗುಳಿದ ಕಾರಣ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶ್ರೀನಾಥ್ ಅರವಿಂದ್ ಅವರ ಆಯ್ಕೆಯನ್ನು ಐಪಿಎಲ್ ತಾಂತ್ರಿಕ ಸಮಿತಿ ಸಮ್ಮತಿಸಿದೆ.

ಬಿಸಿಸಿಐನ ಕಾರ್ಯದರ್ಶಿ ಅನುರಾಗ್ ಠಾಕೂರ್, ಸೌರವ್ ದಾಸ್ ಗುಪ್ತಾ, ಸುಬೀರ್ ಗಂಗೂಲಿ, ಸೌರವ್ ಗಂಗೂಲಿ ಹಾಗೂ ರವಿಶಾಸ್ತ್ರಿ ಅವರನ್ನೊಳಗೊಂಡ ತಾಂತ್ರಿಕ ಸಮಿತಿ, ಅರವಿಂದ್ ಆರ್‍ಸಿಬಿ ಪರ ಆಡಲು ಅನುಮತಿ ನೀಡಿದೆ. ಈ ಮೂಲಕ ಅರವಿಂದ್ ಎರಡನೇ ಬಾರಿಗೆ ಆರ್‍ಸಿಬಿ ತಂಡದಲ್ಲಿ ಆಡಲು ಸಜ್ಜಾಗಿದ್ದಾರೆ.

ಅರವಿಂದ್ ಈ ಹಿಂದೆ 2011 ಮತ್ತು 2012ರ ಆವೃತ್ತಿ ವೇಳೆ ಆರ್‍ಸಿಬಿ ಪರ ಆಡಿದ್ದರು. ಅಲ್ಲದೆ 2011ರ ಆವೃತ್ತಿಯಲ್ಲಿ ಆರ್‍ಸಿಬಿ ಪರ ಅರವಿಂದ್ (21) ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಕಳೆದ ರಣಜಿ ಟೂರ್ನಿಯಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದ ಅರವಿಂದ್ (42 ವಿಕೆಟ್) ಕರ್ನಾಟಕ ಸತತ ಎರಡನೇ ಬಾರಿಗೆ ರಣಜಿ ಟೂರ್ನಿ ಗೆದ್ದುಕೊಳ್ಳಲು ಪ್ರಮುಖ ಪಾತ್ರ
ವಹಿಸಿದ್ದರು. ಅಲ್ಲದೆ ರಣಜಿ ಋತುವಿನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಈ ಮೂಲಕ ಆರ್‍ಸಿಬಿ ಬೌಲಿಂಗ್ ವಿಭಾಗಕ್ಕೆ ಬಲ ಬಂದಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com