ವಿಶ್ವ ಅಥ್ಲೆಟಿಕ್ಸ್ ಗೆ ವಿಕಾಸ್ ಅರ್ಹತೆ

ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಡಿಸ್ಕಸ್ ಥ್ರೋ ಪಟು ಕರ್ನಾಟಕದ ವಿಕಾಸ್ ಗೌಡ ಬಿಜೀಂಗ್ ನಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ವಿಕಾಸ್ ಗೌಡ
ವಿಕಾಸ್ ಗೌಡ

ಬೆಂಗಳೂರು: ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಡಿಸ್ಕಸ್ ಥ್ರೋ ಪಟು ಕರ್ನಾಟಕದ ವಿಕಾಸ್ ಗೌಡ ಬಿಜೀಂಗ್ ನಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಅಮೆರಿದಕ ಸ್ಯಾನ್ ಡಿಗೋದ ಒಲಂಪಿಕ್ಸ್ ತರಬೇತಿ ಕೇಂದ್ರದಲ್ಲಿ ನಡೆದ ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಜಯ ಸಾಧಿಸಿದ ವಿಕಾಸ್ ಗೌಡ ಈ ಮೂಲಕ ಮುಂಬರುವ ಆಗಸ್ಟ್ 22 ರಿಂದ 30 ರವರೆಗೆ ನಡೆಯಲಿರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಸಂಪಾದಿಸಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯಲು 65 ಕಿಮೀ ದೂರ ಎಸೆಯಬೇಕಿತ್ತು.  ವಿಕಾಸಗೌಡ ಸ್ಪರ್ಧೆಯಲ್ಲಿ ಈ ಋತುವಿನ  ಶ್ರೇಷ್ಠ ಸಾಧನೆಯಾಗಿರುವ 65. 25 ಮೀ. ದೂರ ಎಸೆಯುವ ಮೂಲಕ ತೇರ್ಗಡೆಯಾಗಿದ್ದಾರೆ.
ಇದು ಪ್ರಸಕ್ತ ಋತುವಿನಲ್ಲಿ ನನ್ನ ಎರಡನೇ ಸ್ಪರ್ಧೆಯಾಗಿದೆ, ಆರಂಭದಲ್ಲೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದು ಕೊಂಡಿರುವುದು ಸಂತೋಷವಾಗಿದೆ.
ಈಗ ಯಾವುದೇ ವಿಷಯದ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ವಿಶ್ವ ಚಾಂಪಿಯನ್ ಶಿಪ್ ಮತ್ತು ಶಾಂಘೈನಲ್ಲಿ ನಡೆಯಲಿರುವ ಲೀಗ್ ಸೇರಿದಂತೆ ವಿಶ್ವ ಚಾಂಪಿಯನ್ ಶಿಪ್ ಗೂ ಮೊದಲು 5-6 ಸ್ಪರ್ಧೆಗಳಲ್ಲಿ  ಭಾಗವಹಿಸುತ್ತಿದ್ದೇನೆ. ಹಾಗಾಗಿ ಚಾಂಪಿಯನ್ ಶಿಪ್ ಗೂ ಮೊದಲು ಉತ್ತಮ ತಯಾರಿ ನಡೆಸಿದಂತಾಗಲಿದೆ. ಎಂದು ವಿಕಾಸ್ ತಿಳಿಸಿದ್ದಾರೆ.
ಕಳೆದ ಎರಡು ವಿಶ್ವ ಚಾಂಪಿಯನ್ ನ ಫೈನಲ್ ಸುತ್ತಿಗೆ ಪ್ರವೇಶಿಸಿದ್ದ ವಿಕಾಸ್, ಈ ಬಾರಿ  ಪದಕ ಪಡೆಯುವ ಗುರಿ ಹೊಂದಿದ್ದಾರೆ. ಪದಕ ಗೆದ್ದರೆ, ಕನಸು ನನಸಾದಂತಾಗಲಿದೆ. ಈ ಸಾಧನೆ ಮಾಡುವುದು ಸುಲಭವಲ್ಲ, ಮುಂದಿನ ವರ್ಷ ಒಲಂಪಿಕ್ಸ್ ಕ್ರೀಡಾಕೂಟ ನಡೆಯಲಿರುವ ಹಿನ್ನೆಲೆಯಲ್ಲಿ ಈ ಋತು ಬಹಳ ಪ್ರಮುಖವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com