ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿದ ನೊವಾಕ್ ಜೊಕೊವಿಕ್

ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ಆಂಡಿ ಮುರ್ರೆ ಅವರನ್ನು ಹಿಂದಿಕ್ಕಿ ಟೆನಿಸ್ ವೃತ್ತಿಪರ ಸಂಘ(ಎಟಿಪಿ) ರ್ಯಾಂಕಿಂಗ್ ಪಟ್ಟಿಯಲ್ಲಿ...
ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್

ಮ್ಯಾಡ್‌ರಿಡ್: ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ಆಂಡಿ ಮುರ್ರೆ ಅವರನ್ನು ಹಿಂದಿಕ್ಕಿ ಟೆನಿಸ್ ವೃತ್ತಿಪರ ಸಂಘ(ಎಟಿಪಿ) ರ್ಯಾಂಕಿಂಗ್ ಪಟ್ಟಿಯಲ್ಲಿ ಸೆರೆಬಿಯಾದ ಆಟಗಾರ ನೊವಾಕ್ ಜೊಕೊವಿಕ್ ನಂಬರ್ 1 ಸ್ಥಾನಕ್ಕೇರಿದ್ದಾರೆ.

142 ವಾರಗಳ ಕಾಲ ಟೆನಿಸ್  ರಂಗದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ರ್ಯಾಂಕಿಂಗ್ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, 2015ರ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‌ನಲ್ಲಿ ಆಂಡಿ ಮುರ್ರೆ ವಿರುದ್ಧ 7-6, 6-7, 6-3, 6-0 ಸೆಟ್‌ಗಳಿಂದ ಗೆಲ್ಲುವ ಮೂಲಕ 13,485 ಅಂಕಗಳನ್ನು ಗಳಿಸಿ ಎಟಿಪಿ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಪಟ್ಟವನ್ನು ಅಲಂಕರಿಸಿದ್ದಾರೆ.

17 ಬಾರಿ ಗ್ರ್ಯಾಂಡ್ ಸ್ಲಮ್ ಪ್ರಶಸ್ತಿ ವಿಜೇತರಾದ ರೋಜರ್ ಫೆಡರರ್ 2 ಸ್ಥಾನದಲ್ಲಿದ್ದು, 9 ಬಾರಿ ಚಾಂಪಿಯನ್ಸ್ ಆಗಿರುವ ರಾಫಲ್ ನಡಾಲ್ 4ನೇ ಸ್ಥಾನದಲ್ಲಿದ್ದಾರೆ.
 
ಟಾಪ್ 10 ಆಟಗಾರರು:

1) ನೊವಾಕ್ ಜೊಕೊವಿಕ್ (ಸೆರೆಬಿಯಾ)- 13,845 ಪಾಯಿಂಟ್ಸ್
2) ರೋಜರ್ ಫೆಡರರ್  (ಸ್ವಿಡ್ಜರ್‌ಲೆಂಡ್)- 8,385
3) ಆಂಡಿ ಮುರ್ರೆ (ಸ್ಕಾಟ್‌ಲೆಂಡ್)- 5,390
4) ರಾಫಲ್ ನಾಡಲ್  (ಸ್ಪೆನ್)-  5390
5) ಕಿ ನಿಶ್‌ಕೋರಿ (ಜಪಾನ್)- 5280
6) ಮಿಲೋಸ್ ರೋನಿಕ್ (ಕೆನಡಾ)- 5070
7) ಥಾಮಸ್ ಬ್ರಿಡ್‌ಹೆಚ್ (ಝಿಕ್)- 4960
8) ಡೇವಿಡ್ ಫಿರರ್ (ಸ್ಪೆನ್)- 4490
9) ಸ್ಟ್ಯಾನ್ ವ್ಯಾವ್‌ರಿನ್‌ಕಾ (ಸ್ವಿಡ್ಜರ್‌ಲ್ಯಾಂಡ್) - 3495
10) ಮರಿನ್ ಕ್ಲಿಕ್ (ಕೋರ್ಟಿಯಾ)- 3405

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com