ಜೆಕ್ ವಿರುದ್ಧ ಪವಾಡ ಜರುಗಬೇಕು: ಮಹೇಶ್ ಭೂಪತಿ

ಪ್ರತಿಷ್ಠಿತ ಡೇವಿಸ್ ಕಪ್ ನ ವಿಶ್ವ ಗ್ರೂಪ್ ಪ್ಲೇ ಆಫ್ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡವಾದ ಜೆಕ್ ಗಣರಾಜ್ಯವನ್ನು ಎದುರಿಸಲಿರುವ ಭಾರತ ತಂಡ, ಜಯಕ್ಕಾಗಿ ಶಕ್ತಿಮೀರಿ...
ಮಹೇಶ್ ಭೂಪತಿ
ಮಹೇಶ್ ಭೂಪತಿ

ನವದೆಹಲಿ: ಪ್ರತಿಷ್ಠಿತ ಡೇವಿಸ್ ಕಪ್ ನ ವಿಶ್ವ ಗ್ರೂಪ್ ಪ್ಲೇ ಆಫ್ ಪಂದ್ಯಾವಳಿಯಲ್ಲಿ ಬಲಿಷ್ಠ ತಂಡವಾದ ಜೆಕ್ ಗಣರಾಜ್ಯವನ್ನು ಎದುರಿಸಲಿರುವ ಭಾರತ ತಂಡ, ಜಯಕ್ಕಾಗಿ ಶಕ್ತಿಮೀರಿ ಹೋರಾಡಬೇಕಿದೆ ಎಂದು ಹಿರಿಯ ಟೆನಿಸಿಗ ಮಹೇಶ್ ಭೂಪತಿ ಕಿವಿಮಾತು ಹೇಳಿದ್ದಾರೆ.

ಸೆಪ್ಟಂಬರ್ 18ರಿಂದ 20ರವರೆಗೆ ನಡೆಯಲಿರುವ ಈ ಪಂದ್ಯಾವಳಿಗೆ ಇಲ್ಲಿನ ಆರ್ ಕೆ ಖನ್ನಾ ಟೆನಿಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಜೆಕ್ ತಂಡದ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿರುವ ಭೂಪತಿ, ಭಾರತಕ್ಕೆ ಆಗಮಿಸಲಿರುವ ಜೆಕ್ ಗಣರಾಜ್ಯದ ತಂಡದಲ್ಲಿ ವಿಶ್ವದ 6ನೇ ಶ್ರೇಯಾಂಕಿತ ಆಟಗಾರ ಥಾಮಸ್ ಬೆರ್ಡಿಚ್ ಹಾಗೂ ಹಲವಾರು ಗ್ರಾಂಡ್ ಸ್ಲಾಂ ಪಂದ್ಯಾವಳಿಗಳ ವಿಜೇತ ರಾಡೆಕ್ ಸ್ಟೆಪಾನೆಕ್ ಇರಲಿದ್ದಾರೆ.

ಇದು ಭಾರತಕ್ಕೆ ಎಚ್ಚರಿಕೆಯ ಕರೆ ಗಂಟೆ ಎಂದರು. ಶನಿವಾರ ನಡೆದ 2ನೇ ಅಂತರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ ಬಗ್ಗೆ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೇಸ್ ಬಗ್ಗೆ ಮೆಚ್ಚುಗೆ ಮಾತು! ಟೆನಿಸ್ ರಂಗದ ಡಬಲ್ಸ್ ವಿಭಾಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಆನಂತರ ದೂರಾಗಿದ್ದ ಲಿಯಾಂಡರ್ ಪೇಸ್ ಹಗೂ ಮಹೇಶ್ ಭೂಪತಿ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನಲ್ಲಿ ಒಂದಾಗಲಿದ್ದಾರೆ.

ಈ ಬಗ್ಗೆ ಪ್ರತಿಕ್ರಯಿಸಿರುವ ಭೂಪತಿ, ಲಿಯಾಂಡರ್ ಅವರು ವಿಶ್ವ ಕಂಡ ಶ್ರೇಷ್ಠ ಟೆನಿಸಿಗರಲ್ಲೊಬ್ಬರು. ಅವರೊಂದಿಗೆ ಆಡುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ. ನಾವಿಬ್ಬರೂ ಟೆನಿಸ್ ಅಂಗಣದಲ್ಲಿ ಒಟ್ಟಾಗಿ ಕಣಕ್ಕಿಳಿಯುವುದು ಪ್ರೇಕ್ಷಕರಿಗೆ ರಸದೌತಣ ನೀಡುವುದು ಗ್ಯಾರಂಟಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com