
ಹ್ಯಾಂಬರ್ಗ್: ಕಳಪೆ ಫಾರ್ಮ್ ನಿಂದ ಕಂಗೆಟ್ಟು , ಮತ್ತೆ ತನ್ನ ಲಯವನ್ನು ಕಂಡೊಳ್ಳುವ ನಿಟ್ಟಿನಲ್ಲಿ ಕ್ಲೇ ಕೋರ್ಟ್ ಟೆನಿಸ್ ನತ್ತ ಮುಖ ಮಾಡಿದ್ದ ಸ್ಪೇನ್ ಟೆನಿಸ್ ತಾರೆ ರಾಫೆಲ್ ನಡಾಲ್, ಹ್ಯಾಂಬರ್ಗ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ನಡಾಲ್, ತಮ್ಮ ಪ್ರತಿಸ್ಪರ್ಧಿ ಎಂಟನೇ ಶ್ರೇಯಾಂಕಿತ ಫ್ಯಾಬಿಯೋ ಫೋಗ್ನಿನಿ ವಿರುದ್ಧ 7-5, 7-5 ನೇರ ಸೆಟ್ ಗಳ ಸೆಟ್‍ಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡರು.
ಪಂದ್ಯದಲ್ಲಿ ಉಭಯ ಆಟಗಾರರು ತೀವ್ರ ಹೋರಾಟ ನಡೆಸಿದರಾ ದರೂ ನಡಾಲ್ ಮಾತ್ರ ತಮ್ಮ ನಿಯಂತ್ರ ಣವನ್ನು ಕಳೆದುಕೊಳ್ಳಲಿಲ್ಲ. ಎರಡೂ ಸೆಟ್ ಗಳಲ್ಲಿಯೂ ಉತ್ತಮ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗು ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು.
ಈ ತಿಂಗಳಾಂತ್ಯದಲ್ಲಿ ವರ್ಷದ ನಾಲ್ಕನೇ ಗ್ರ್ಯಾಂಡ್ ಸ್ಲಾಂ ಟೆನಿಸ್ ಟೂರ್ನಿಯಗಿರುವ ಯು.ಎಸ್ ಓಪನ್ ಆರಂಭವಾಗಲಿದ್ದು, ಈ ನಡುವೆ ರಾಫೆಲ್ ನಡಾಲ್ ಮತ್ತೆ ಕ್ಲೇ ಕೋರ್ಟ್ ಗೆ ಮೊರೆ ಹೊಗಿದ್ದು, ಸಾಕಷ್ಟು ಜನರ ಹುಬ್ಬೇರುವಂತೆ ಮಾಡಿತ್ತು. ಗಾಯದ ಸಮಸ್ಯೆಗೆ ಸಿಲುಕಿ ಮತ್ತೆ ಕಣಕ್ಕಿಳಿದ ನಂತರ ನಡಾಲ್ ನಿರಂತರವಾಗಿ ಪ್ರಮುಖ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದರು. ಅಲ್ಲದೆ ತಮ್ಮ ದಶಕಕ್ಕೂ ಹೆಚ್ಚಿನ ವೃತ್ತಿ ಜೀವನದಲ್ಲಿ ಮೊಟ್ಟ ಮೊದ ಬಾರಿಗೆ ವಿಶ್ವ ರ್ಯಾಂಕಿಂಗ್ನಲ್ಲಿ 10 ನೇ ಸ್ಥಾನಕ್ಕೆ ಕುಸಿದಿದ್ದರು. ಇನ್ನು ಪ್ರಸಕ್ತ ವರ್ಷದಲ್ಲೇ 12 ಪಂದ್ಯಗಳಲ್ಲಿ ಸೋತಿದ್ದ ಮಡಾಲ್, ಇಷ್ಟು ಪ್ರಮಾಣದಲ್ಲಿ ಯಾವತ್ತೂ ಸತತ ವೈಫಲ್ಯ ಅನುಭವಿಸಿರಲಿಲ್ಲ.
Advertisement