ಸೋಮ್ ದೇವ್ ದೇವವರ್ಮನ್
ಕ್ರೀಡೆ
ವಾಷಿಂಗ್ಟನ್ ಓಪನ್ : ಸೋಮ್ ಗೆ ನಿರಾಸೆ
ಭಾರತದ ಯುವ ಆಟಗಾರ ಸೋಮ್ ದೇವ್ ದೇವವರ್ಮನ್, ಆಗಸ್ಟ್ 3ರಿಂದ ಆರಂಭಗೊಳ್ಳಲಿರುವ ವಾಷಿಂಗ್ಟನ್ ಟೆನಿಸ್ ಚಾಂಪಿಯನ್‍ನ ಪ್ರಮುಖ...
ವಾಷಿಂಗ್ಟನ್: ಭಾರತದ ಯುವ ಆಟಗಾರ ಸೋಮ್ ದೇವ್ ದೇವವರ್ಮನ್, ಆಗಸ್ಟ್ 3ರಿಂದ ಆರಂಭಗೊಳ್ಳಲಿರುವ ವಾಷಿಂಗ್ಟನ್ ಟೆನಿಸ್ ಚಾಂಪಿಯನ್‍ನ ಪ್ರಮುಖ ಸುತ್ತಿನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದಾರೆ.ಮುಖ್ಯ ಪಂದ್ಯಾವಳಿಗಾಗಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋಮ್ ದೇವ್, ಬಾರ್ಬಡೋಸ್‍ನ ಡೇರಿಯನ್ ಕಿಂಗ್ ವಿರುದ್ಧ 2-6, 7-5 ಹಾಗೂ 2-6 ಸೆಟ್‍ಗಳ ಅಂತರದಲ್ಲಿ ಪರಾಭವಗೊಂಡರು. ಭಾರತದ ಮತ್ತೊಬ್ಬ ಆಟಗಾರ ರೋಹನ್ ಬೋಪಣ್ಣ, ಈಗಾಗಲೇ ಮುಖ್ಯ ವಿಭಾಗದಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರು, ರೊಮೇನಿಯಾದ ಫ್ಲಾರೆನ್ ಮರ್ಜಿಯಾ ಜತೆಗೂಡಿ ಕಣಕ್ಕಿಳಿಯಲಿದ್ದಾರೆ.

