ಬೋಪಣ್ಣ-ಮರ್ಜಿಯಾ
ಬೋಪಣ್ಣ-ಮರ್ಜಿಯಾ

ಬೋಪಣ್ಣ-ಮರ್ಜಿಯಾ ಕ್ವಾರ್ಟರ್‍ಗೆ

ಭಾರತದ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ, ರೊಮೇನಿಯಾದ ಪ್ಲೊರಿನ್ ಮರ್ಜಿಯಾ ಜೋಡಿ...

ವಾಷಿಂಗ್ಟನ್: ಭಾರತದ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ, ರೊಮೇನಿಯಾದ  ಪ್ಲೊರಿನ್   ಮರ್ಜಿಯಾ ಜೋಡಿ ವಾಷಿಂಗ್ಟನ್ ಓಪನ್   ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮಂಗಳವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಬ್ರಿಟನ್‍ನ ಆ್ಯಂಡಿ ಮರ್ರೆ ಹಾಗೂ ಕೆನಡಾದ ಡೇನಿಯಲ್ ನೆಸ್ಟರ್ ಜೋಡಿಯ ವಿರುದ್ಧ ಸೆಣಸಿದ ಇಂಡೋ ರೊಮೇನಿಯನ್
ಜೋಡಿ, ಪಂದ್ಯವನ್ನು 2-6, 6-1, 10-3 ಸೆಟ್‍ಗಳ ಅಂತರದಲ್ಲಿ ಗೆದ್ದುಕೊಂಡಿತು.
ಮೊದಲ ಸೆಟ್‍ನಲ್ಲಿ ಸೋತರೂ, ಎರಡನೇ ಸೆಟ್ ನಲ್ಲಿ ಪುಟಿದೆದ್ದ ರೋಹನ್ ಹಾಗೂ ಮರ್ಜಿಯಾ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ, ಮೂರನೇ ಹಾಗೂ ಅಂತಿಮ ಸೆಟ್‍ನಲ್ಲಿ ಪೈಪೋಟಿಯ ಪ್ರದರ್ಶನ ಹೊರಹೊಮ್ಮಿದ ಕಾರಣದಿಂದಾಗಿ, ಆ ಸೆಟ್ ಟೈಬ್ರೇಕರ್‍ಗೆ ಜಾರಿತು. ನಂತರ, ಮುಂದುವರಿದ ಆಟದಲ್ಲಿ ಭಾರತ-ರೊಮೇನಿಯಾ ಜೋಡಿಯೇ ಮೈಲುಗೈ ಸಾಧಿಸಿ ಜಯ ಕಂಡಿತು. ಕ್ವಾರ್ಟರ್ ಫೈನಲ್‍ನಲ್ಲಿ ರೋಹನ್-ಮರ್ಜಿಯಾ  ಜೋಡಿ, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ಹಾಗೂ ಅಮೆರಿಕದ ಮಾರ್ಡಿ ಫಿಶ್ ಜೋಡಿಯನ್ನು ಎದುರಿಸಲಿದೆ. ಡಿಮಿಟ್ರಿವ್ ಹಾಗೂ ಫಿಶ್ ಜೋಡಿ, ಕೆನಡಾದ ಪಾಸ್ಪಿಸಿಲ್ ಹಾಗೂ ಸೋಕ್ ಜೋಡಿ ವಿರುದ್ಧ 6-7 (2), 7-6 (5), 10-8 ಸೆಟ್‍ಗಳ
ಅಂತರದಲ್ಲಿ ಜಯ ಸಾಧಿಸಿದೆ.

ಮಣ್ಣಿನ ಅಂಕಣಕ್ಕೆ ವಾಪಸಾದ ಮರ್ರೆ
ವಿಶ್ವದ 3ನೇ ಶ್ರೇಯಾಂಕಿತ ಟೆನಿಸ್ ಆಟಗಾರ ಆ್ಯಂಡಿ ಮರ್ರೆ ಸುಮಾರು 9 ವರ್ಷಗಳ ನಂತರ ವಾಷಿಂಗ್ಟನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. 2006ರ ಆವೃತ್ತಿ ಯಲ್ಲಿ ಆಡಿದ್ದ ಅವರು, ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದರು. ಮಂಗಳವಾರ ನಡೆಯಬೇಕಿದ್ದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಸಿಕ್ಕಿದೆ. ಹಾಗಾಗಿ, ಅವರು ಬುಧವಾರ ತಮ್ಮ ಮೊದಲ ಪಂದ್ಯವನ್ನು ಆಡಲಿ ದ್ದು, ಜರ್ಮನಿಯ ಬೆಂಜಮಿನ್‍ಬೆಕರ್ ಅಥವಾ ರಷ್ಯಾದ ಟೆಮುರಾಜ್ ಗಬಾಶ್ವಿಲಿಯನ್ನು ಎದುರಿಸಲಿದ್ದಾರೆ. ಆದರೆ, ಈ ಖುಷಿ ಪಂದ್ಯಾವಳಿಯ ಮೊದಲ ದಿನವೇ ಮಾಯವಾಗಿದೆ. ಮಂಗಳವಾರ ನಡೆದ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಅವರು ಸೋಲನುಭವಿಸಿದ್ದಾರೆ.



Related Stories

No stories found.

Advertisement

X
Kannada Prabha
www.kannadaprabha.com