ಟೈಟಾನ್ಸ್ ಮುಂದೆ ಮಂಕಾದ ವಾರಿಯರ್ಸ್

ರೈಡರ್‍ಗಳ ಚುರುಕಿನ ಪ್ರದರ್ಶನ, ರಕ್ಷಣಾತ್ಮಕ ವಿಭಾಗದ ಭದ್ರ ಕೋಟೆಯಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು...
ಪ್ರೊ ಕಬಡ್ಡಿ ಲೀಗ್‍: ತೆಲುಗು ಟೈಟಾನ್ಸ್
ಪ್ರೊ ಕಬಡ್ಡಿ ಲೀಗ್‍: ತೆಲುಗು ಟೈಟಾನ್ಸ್

ಹೈದರಾಬಾದ್: ರೈಡರ್‍ಗಳ ಚುರುಕಿನ ಪ್ರದರ್ಶನ, ರಕ್ಷಣಾತ್ಮಕ ವಿಭಾಗದ ಭದ್ರ ಕೋಟೆಯಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದ ತೆಲುಗು ಟೈಟಾನ್ಸ್, ಪ್ರೊ ಕಬಡ್ಡಿ ಲೀಗ್‍ನಲ್ಲಿ ಮತ್ತೆ ತನ್ನ ಪ್ರಾಬಲ್ಯ ಮೆರೆದಿದೆ.

ಬುಧವಾರ ಗಾಚಿಬೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ 4428ರಿಂದ 16 ಅಂಕಗಳ ಭರ್ಜರಿ ಜಯ ತನ್ನದಾಗಿಸಿ ಕೊಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಪಂದ್ಯದ ಮೊದಲಾರ್ಧದಲ್ಲಿ ಅಬ್ಬರದ ಪ್ರದರ್ಶನದ ಮೂಲಕ ಬೆಂಗಾಲ್ ವಾರಿ ಯರ್ಸ್ ತಂಡದ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿದ ತೆಲುಗು ಟೈಟಾನ್ಸ್ ತಂಡ, ಹೊಸ ದಾಖಲೆ ನಿರ್ಮಿಸಿತು.

ಪ್ರಸಕ್ತ ಸಾಲಿನಲ್ಲಿ ಪಂದ್ಯದ ಮೊದಲಾರ್ಧದಲ್ಲಿ ಅತಿ ಹೆಚ್ಚು ಅಂಕ ದಾಖಲಿಸಿದ ಸಾಧನೆ ಮಾಡಿತು. ಪಂದ್ಯದ ಆರಂಭದಿಂದಲೇ ಪ್ರತಿಸ್ಪರ್ಧಿಗಳನ್ನು ಚುರುಕಿನ ರೈಡ್ ಮತ್ತು ಸಂಘಟಿತ ರಕ್ಷಣಾತ್ಮಕ ವಿಭಾಗದಿಂದ ಕಟ್ಟಿ ಹಾಕಿದ ತೆಲುಗು ಟೈಟಾನ್ಸ್ ತಂಡ ಮೊದಲಾರ್ಧದಲ್ಲಿ 279ರಿಂದ 18 ಅಂಕಗಳ ಅಂತರದ ಮುನ್ನಡೆ ಪಡೆದಿತ್ತು. ಆರಂಭಿಕ 20 ನಿಮಿಷದಲ್ಲಿ ಎರಡು ಬಾರಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಆಲೌಟ್ ಮಾಡಿದ ಟೈಟಾನ್ಸ್ ತಂಡ ತವರಿನ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಇನ್ನು ಪಂದ್ಯದ ಎರಡನೇ ಅವಧಿಯಲ್ಲೂ ತನ್ನ ಬಿಗಿ ಹಿಡಿತ ಮುಂದುವರೆಸಿದ ಆತಿಥೇಯ ತಂಡ, ಸ್ಥಿರವಾಗಿ ಉತ್ತಮ ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ಜಯದತ್ತ ಸಾಗಿತು. ಈ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಎಲ್ಲ ವಿಭಾಗದಲ್ಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಅದರಲ್ಲೂ ರಕ್ಷಣಾತ್ಮಕ ವಿಭಾಗದ ನೀರಸ ಪ್ರದರ್ಶನ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಬೆಂಗಾಲ್ ವಾರಿಯರ್ಸ್ ತಂಡ ಪಂದ್ಯದ 37ನೇ ನಿಮಿಷದಲ್ಲಿ ಮೊದಲ ಬಾರಿಗೆ ಎದುರಾಳಿ ರೈಡರ್ ಅನ್ನು ಕಟ್ಟಿ ಹಾಕುವಲ್ಲಿ ಸಫಲವಾಯಿತು.

ಇನ್ನು ಪಂದ್ಯದಲ್ಲಿ ದೀಪಕ್ ನಿವಾಸ್ ಹೂಡಾ ಆಲ್ರೌಂಡರ್ ಪ್ರದರ್ಶನ ನೀಡಿದರೆ, ರಾಹುಲ್ ಚೌಧರಿ ಅತ್ಯುತ್ತಮ ರೈಡರ್ ಆಗಿ ಹೊರ ಹೊಮ್ಮಿ ದರು. 18 ವರ್ಷದ ಯುವ ಆಟಗಾರ ಸಂದೀಪ್ ಎದುರಾಳಿ ರೈಡರ್‍ಗಳನ್ನು ಅತ್ಯುತ್ತಮ ರೀತಿಯಲ್ಲಿ ಕಟ್ಟಿ ಹಾಕಿ ಗಮನ ಸೆಳೆದರು. ಇನ್ನು ಬೆಂಗಾಳ್ ವಾರಿಯರ್ಸ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಹೇಂದ್ರ ಗಣೇಶ್ ರಜಪೂತ್ 14 ಅಂಕ ಗಳನ್ನು ಗಳಿಸಿದರಾದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com