ಬುಲ್ಸ್ ದಾಳಿಗೆ ವಾರಿಯರ್ಸ್ ತತ್ತರ

ಸಂಘಟಿತ ಪ್ರದರ್ಶನದ ಮೂಲಕ ಎದುರಾಳಿ ತಂಡದ ಮೇಲೆ ಪ್ರಭುತ್ವ ಸಾಧಿಸಿದ ಬೆಂಗಳೂರು ಬುಲ್ಸ್ ತಂಡ...
ಪ್ರೊ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್-ಬೆಂಗಾಲ್ ವಾರಿಯರ್ಸ್
ಪ್ರೊ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್-ಬೆಂಗಾಲ್ ವಾರಿಯರ್ಸ್

ಹೈದರಾಬಾದ್: ಸಂಘಟಿತ ಪ್ರದರ್ಶನದ ಮೂಲಕ ಎದುರಾಳಿ ತಂಡದ ಮೇಲೆ ಪ್ರಭುತ್ವ ಸಾಧಿಸಿದ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ತಮ್ಮ ಗೆಲುವಿನ ಯಾನವನ್ನು ಮುಂದುವರಿಸಿದೆ.

ಗುರುವಾರ ಗಾಚಿಬೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 32ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 33-22 ಅಂತರದಿಂದ ಜಯಿಸಿತು. ಈ ಮೂಲಕ ತಮ್ಮ ಗೆಲುವಿನ ಹಾದಿಯಲ್ಲಿ ಮುಂದುವಿರಿದಿದೆ. ಬೆಂಗಳೂರು ಬುಲ್ಸ್ ತಂಡದ ಪರ ಅತ್ಯುತ್ತಮ ರೈಡಿಂಗ್ ಪ್ರದರ್ಶನ ನೀಡಿದ ಅಜಯ್ ಠಾಕೂರ್, 14 ರೈಡ್‍ಗಳಿಂದ 12 ಅಂಕಗಳನ್ನು ಸಂಪಾದಿಸುವ ಮೂಲಕ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು.

ಇನ್ನು ನಾಯಕ ಮಂಜೀತ್ ಚಿಲ್ಲರ್ ಆಲ್ರೌಂಡ್ ಪ್ರದರ್ಶನ ಮುಂದುವರೆಸಿದ್ದು, ರೈಡಿಂಗ್ ಹಾಗೂ ರಕ್ಷಣಾತ್ಮಕ ವಿಭಾಗ ಸೇರಿದಂತೆ 8 ಅಂಕಗಳನ್ನು ಬಾಚಿ ಕೊಂಡರು. ಈ ಇಬ್ಬರು ಆಟಗಾರರು ತಮ್ಮ ಜವಾ ಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಪರಿಣಾಮ ತಂಡದ ಗೆಲುವಿನ ಹಾದಿ ಸುಗಮವಾಯಿತು.

ಇನ್ನು ಬೆಂಗಾಲ್ ವಾರಿಯರ್ಸ್ ತಂಡ ಕಳೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ನೀಡಿದ ನೀರಸ ಪ್ರದರ್ಶನವನ್ನೇ ಮುಂದುವರೆಸಿತು. ರೈಡಿಂಗ್ ಹಾಗೂ ರಕ್ಷಣಾತ್ಮಕ ಎರಡೂ ವಿಭಾಗ ದಲ್ಲೂ ವೈಫಲ್ಯ ಅನುಭವಿಸಿ ಅದಕ್ಕೆ ಭಾರೀ ಬೆಲೆತೆತ್ತಿತು. ಬೆಂಗಾಲ್ ತಂಡದ ಪರ ದೀಪಕ್ ಕುಮಾರ್ ಹಾಗೂ ನಿಲೇಶ್ ಶಿಂಧೆ ತಲಾ 5 ಅಂಕಗಳಿಸಿದ್ದು, ತಂಡದ ಪರ ಗರಿಷ್ಠವಾಗಿತ್ತು.

ಬೆಂಗಳೂರು ಬುಲ್ಸ್ ತಂಡ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ 14ನೇ ನಿಮಿಷದಲ್ಲಿ ಬೆಂಗಳೂರು ತಂಡ 85ರ ಮುನ್ನಡೆ ಹೊಂದಿತ್ತಾದರೂ 19ನೇ ನಿಮಿಷದ ವೇಳೆಗೆ ಹೋರಾಟಕಾರಿ ಪ್ರದರ್ಶನದ ಮೂಲಕ ಬೆಂಗಾಲ್ ವಾರಿಯರ್ಸ್ ತಂಡ 99ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ಸ್ಥಿರ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್, ಪಂದ್ಯದ ಮೊದಲಾರ್ಧ ಮುಕ್ತಾಯದ ವೇಳೆಗೆ 1610ರಿಂದ 6 ಅಂಕ ಮುನ್ನಡೆ ಸಾಧಿಸಿತು. ಪಂದ್ಯದ ಎರಡನೇ ಅವಧಿಯಲ್ಲೂ ತನ್ನ ಆಲ್ರೌಂಡ್ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್ ತಂಡ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿ, ಜಯದ ಕಡೆ ಸಾಗಿತು.
ಟೈಟಾನ್ಸ್‍ಗೆ ಭರ್ಜರಿ ಗೆಲುವು: ಆತಿಥೇಯ ತೆಲುಗು
ಟೈಟಾನ್ಸ್ ತಂಡ ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ವಿರುದ್ಧ 5432 ಅಂಕಗಳ ಅಂತರದಲ್ಲಿ ಜಯಿಸಿದೆ. ಪಂದ್ಯದ ಮೊದಲಾರ್ಧದಲ್ಲಿ 3812 ಅಂಕ ಗಳಿಸಿದ್ದ ತೆಲುಗು ಪ್ರೊ ಕಬಡ್ಡಿಯ ಪಂದ್ಯದ ಮೊದಲ ಘಟ್ಟದಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ.

ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿಗೆ ತಂಡವೊಂದರ ಗರಿಷ್ಠ ಮೊತ್ತ ಇದಾಗಿದೆ. ಹಾಗೆಯೇ ಈ ಬಾರಿ ತಂಡ 50ರ ಗಡಿ ದಾಟಿದ್ದು ಮೊದಲ ಬಾರಿಗೆ. ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಪರ ರಾಹುಲ್ ಚೌಧರಿ (11), ಮೀರಜ್ ಶೇಖ್ (11) ಹಾಗೂ ದೀಪಕ್ ನಿವಾಸ್ ಹೂಡಾ (9) ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಜಯ ತಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com