
ನವದೆಹಲಿ: ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ತನ್ನ ಸುದೀರ್ಘ ಕಾಲದ ಗೆಳತಿ ಅಶ್ಪಾಲ್ ಕೌರ್ ಭೋಗಲ್ ಅವರನ್ನು ಸದ್ಯದಲ್ಲೇ ಬಾಳಸಂಗಾತಿಯನ್ನಾಗಿ ವರಿಸುವುದು ಪಕ್ಕಾ ಆಗಿದ್ದು ಇದನ್ನು ಶುಕ್ರವಾರ ಟ್ವಿಟರ್‍ನಲ್ಲಿ ಸ್ವತಃ ಅಶ್ಪಾಲ್ ತಿಳಿಸಿದ್ದಾರೆ ಎಂದು ಐಬಿಎನ್ ವೆಬ್ ವರದಿ ಮಾಡಿದೆ.
ಬ್ರಿಟಿಷ್ ನಿವಾಸಿ ಅಶ್ಪಾಲ್ ಸದ್ಯ ಇಂಗ್ಲೆಂಡ್ ನ ಲೀಡ್ಸ್‍ನಲ್ಲಿ ವಾಸಿಸುತ್ತಿದ್ದು, ಆಕೆ ಕೂಡ ಹಾಕಿ ಆಟಗಾರ್ತಿ ಎಂಬುದು ಗಮನಾರ್ಹ. ಪ್ರಸ್ತುತ ಅವರು ಗ್ರೇಟ್ ಬ್ರಿಟನ್‍ನ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
``ಸರ್ದಾರ್ ಸಿಂಗ್ ಜತೆಗಿನ ಸ್ನೇಹ ಸಂಬಂಧ ಬಾಳ ಬಂಧವಾಗಿ ಮಾರ್ಪಡುವುದು ಖಾತ್ರಿಯಾಗಿದ್ದು ನಾವಿಬ್ಬರೂ ಸದ್ಯದಲ್ಲೇ ವೆಡ್ಡಿಂಗ್ ಬೆಲ್ ಅನ್ನು ಬಾರಿಸಲಿದ್ದೇವೆ'' ಎಂದು ಅಶ್ಪಾಲ್ ಟ್ವೀಟಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ವೇಳೆ ಮೊದಲಿಗೆ ಭೇಟಿಯಾಗಿದ್ದ ಈ ಜೋಡಿಯ ನಿಶ್ಚಿತಾರ್ಥ ಕಳೆದ ವರ್ಷ ಆಗಸ್ಟ್‍ನಲ್ಲಿ ನೆರವೇರಿತ್ತು.
Advertisement