ಗಂಗೂಲಿ ಕೈಬಿಡಲು ದ್ರಾವಿಡ್ ನಕಾರ

ಹತ್ತು ವರ್ಷಗಳ ಹಿಂದೆ ಟೀಂ ಇಂಡಿಯಾ, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ವೇಳೆ ಅಂದಿನ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ಅವರು...
ರಾಹುಲ್ ದ್ರಾವಿಡ್  -ಸೌರವ್ ಗಂಗೂಲಿ
ರಾಹುಲ್ ದ್ರಾವಿಡ್ -ಸೌರವ್ ಗಂಗೂಲಿ

ನವದೆಹಲಿ: ಹತ್ತು ವರ್ಷಗಳ ಹಿಂದೆ ಟೀಂ ಇಂಡಿಯಾ, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ವೇಳೆ ಅಂದಿನ ಕೋಚ್ ಆಗಿದ್ದ ಗ್ರೇಗ್ ಚಾಪೆಲ್  ಅವರು ಗಂಗೂಲಿಯನ್ನು ತಂಡದಿಂದ ಕೈಬಿಡುವಂತೆ ಒತ್ತಡ ಹೇರಿದ್ದರು. ಆದರೆ, ಅಂದು ಟೀಂ ಇಂಡಿಯಾ ನಾಯಕರಾಗಿದ್ದ ರಾಹುಲ್  ದ್ರಾವಿಡ್  ಇದಕ್ಕೆ ಸಮಮ್ಮತಿಸರಲಿಲ್ಲ ಎಂಬ ಕುತೂಹಲಕಾರಿ ವಿಚಾರವನ್ನು ಬಿಸಿಸಿಐನ ಸಹ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆಂದು ಎನ್ ಡಿಟಿವಿ ವರದಿ ಮಾಡಿದೆ. ಭಾರತೀಯ ಕ್ರಿಕೆಟ್ ತಂಡ 2005ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದಾಗ, ಅಮಿತಾಭ್ ಚೌಧರಿ ಆಗ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ಇಲ್ಲಿ  ನಡೆದ ಖಾಸಗಿ ಮಾತನಾಡಿದ ಅಮಿತಾಭ್, ``ಬಿಸಿಸಿಐ ಜೊತೆಗೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ಗ್ರೇಗ್ ಚಾಪೆಲ್ ಅವರ ಮೊದಲ ಗಂಗೂಲಿ ವಿಚಾರದಲ್ಲಿ ಜಿಗುಟು ಧೋರಣೆ ಪ್ರದರ್ಶಿಸಿದರು. ಇಲ್ಲಿಂದಲೇ ಅವರ ಕಿರಿಕ್ ಶುರುವಾದವು'' ಎಂದ ಅವರು ದ್ರಾವಿಡ್ ಹಾಗೂ ಚಾಪೆಲ್ ನಡುವೆ ನಡೆದಿದ್ದ ವಿಚಾರವನ್ನು ಸವಿಸ್ತಾರವಾಗಿ ಬಿಚ್ಚಿಟ್ಟರು.
``ಆಗ, ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ವೇಳೆ ಅದೊಂದು ದಿನ ವಬುಲಾವೆಯೋ ಕ್ರೀಡಾಂಗಣದಲ್ಲಿ ಪ್ರಥಮ ಟೆಸ್ಟ್  ತಯಾರಿಗಾಗಿ ಭಾರತೀಯ ಆಟಗಾರರು ಅಭ್ಯಾಸ ನಡೆಸು ತ್ತಿರುವಾಗ ದ್ರಾವಿಡ್ ಬಳಿ ಸಾಗಿದ ಚಾಪೆಲ್, ಗಂಗೂಲಿಯವರನ್ನು ತಂಡದಿಂದ ಕೈಬಿಡುವಂತೆ ಸೂಚಿಸಿದರು. ಇದರಿಂದ ಬೇಸರಗೊಂಡ ದ್ರಾವಿಡ್, ಸರಸರನೆ ಡ್ರೆಸ್ಸಿಂಗ್  ರೂಂನೊಳಗೆ ಧಾವಿಸಿ ಬಂದು ಒಂದು ಕುರ್ಚಿಯನ್ನು ಸಿಟ್ಟಿನಿಂದ  ತಮ್ಮತ್ತ ಎಳೆದುಕೊಂಡು ಕೂತರ್  ನಡೆದ ವಿಚಾರವನ್ನು ದ್ರಾವಿಡ್ ವಿವರಿಸಿದರು'' ಎಂದು ಅಮಿತಾಭ್ ಹೇಳಿ ದರು. ಮುಂದೆ, ಚಾಪೆಲ್ ಅವರು ತಮ್ಮ ಹಠಮಾರಿ ಧೋರಣೆ ಪ್ರದರ್ಶಿಸಿದ್ದರಿಂದ ಇದು ಮುಂದೆ ಹಲವಾರು ಆಂತರಿಕ ಕಲಹಕ್ಕೆ ನಾಂದಿ ಹಾಡಿತು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com