
ನವದೆಹಲಿ: ಟೂರ್ನಿಯ ಮಹತ್ವದ ಘಟ್ಟದಲ್ಲಿ ತಮ್ಮ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರುವ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ಪ್ರೊ.ಕಬಡ್ಡಿ ಲೀಗ್‍ನಲ್ಲಿ ಮೂರನೇ ಸ್ಥಾನಕ್ಕೇರಿದೆ.
ಮಂಗಳವಾರ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 31-18 ಅಂಕಗಳ ಅಂತರದಲ್ಲಿ ಪುನೇರಿ ಪಲ್ಟಾನ್ಸ್ ವಿರುದ್ಧ ಜಯಿಸಿತು. ಪಂದ್ಯದಲ್ಲಿ ಮಂದಗತಿಯ ಆರಂಭ ಪಡೆದ ಜೈಪುರ ತಂಡ, 6ನೇ ನಿಮಿಷದ ವೇಳೆಗೆ 1-3 ಅಂತರದ ಹಿನ್ನಡೆಯಲ್ಲಿತ್ತು. ಹೋರಾಟಕಾರಿ ಪ್ರದರ್ಶನ ತೋರಿದ ಜೈಪುರ ಪಂದ್ಯದ ಮೊದಲಾರ್ಧದಲ್ಲಿ 16-8ರ ಮುನ್ನಡೆ ಸಾಧಿಸಿತ್ತು.
ದ್ವಿತೀಯಾರ್ಧದಲ್ಲೂ ಅದೇ ಪ್ರದರ್ಶನ ಮುಂದುವರಿಸಿ 31-18 ಅಂಕಗಳಿಂದ ಜಯಿಸಿತು. ಟೈಟಾನ್ಸ್‍ಗೆ ಮತ್ತೆ ಟೈ: ಎರಡನೇ ಪಂದ್ಯದಲ್ಲಿ ಆತಿಥೇಯ ದಬಾಂಗ್ ಡೆಲ್ಲಿಹಾಗೂ ತೆಲುಗು ಟೈಟಾನ್ಸ್ ತಂಡ ರೋಚಕ ಹೋರಾಟ ನಡೆಸಿ 45-45 ಅಂಕಗಳ ಅಂತರದ ಟೈ ಫಲಿಂತಾಂಶವನ್ನು ಪಡೆದಿವೆ.
Advertisement