ವಿಶ್ವ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಗೆಲುವು

ಎರಡು ಬಾರಿಯ ವಿಶ್ವ ಕಂಚು ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ಯುವ ಆಟಗಾರ ಕಿಡಾಂಬಿ ಶ್ರೀಕಾಂತ್ ಪ್ರತಿಷ್ಠಿತ ವಿಶ್ವ ಬ್ಯಾಡಿಂಟನ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ...
ಪಿ.ವಿ. ಸಿಂಧು (ಸಂಗ್ರಹ ಚಿತ್ರ)
ಪಿ.ವಿ. ಸಿಂಧು (ಸಂಗ್ರಹ ಚಿತ್ರ)

ಜಕಾರ್ತ: ಎರಡು ಬಾರಿಯ ವಿಶ್ವ ಕಂಚು ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ಯುವ ಆಟಗಾರ ಕಿಡಾಂಬಿ ಶ್ರೀಕಾಂತ್ ಪ್ರತಿಷ್ಠಿತ ವಿಶ್ವ ಬ್ಯಾಡಿಂಟನ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ 11ನೇ ಶ್ರೇಯಾಂಕಿತೆ ಸಿಂಧು, ಎರಡನೇ ಸುತ್ತಿನಲ್ಲಿ ಡೆನ್ಮಾರ್ಕ್‍ನ ಲೈನ್ ಕ್ಜಾರ್ಸ್ ಫೆಲ್ಟ್ ವಿರುದ್ಧ 11-21, 21-17, 21-16ರ ಮೂರು ಗೇಮ್ ಗಳ ಕಾದಾಟದಲ್ಲಿ ಜಯ ಪಡೆದರು. ಡೆನ್ಮಾರ್ಕ್ ಆಟಗಾರ್ತಿ ಆರಂಭದಲ್ಲಿಭರ್ಜರಿ ಪ್ರದರ್ಶನ ನೀಡಿ ಮೊದಲ ಗೇಮ್ ಅನ್ನು ಗೆದ್ದುಕೊಂಡಾಗ, ಸಿಂಧು ಕೊಂಚ  ಚಲಿತರಾದರು. ಆದರೆ ಬಳಿಕ ನಡೆದ ಎರಡೂ ಗೇಮ್ ಗಳಲ್ಲಿ ಎಚ್ಚರಿಕೆಯಿಂದ ಸೆಣಸಿದ ಸಿಂಧು, 50 ನಿಮಿಷಗಳ ಕಾದಾಟದಲ್ಲಿ ಜಯಶಾಲಿಯಾಗಿ ನಿಟ್ಟುಸಿರುಗರೆದರು. 2013, 14ರ ಸಾಲಿನ ಕಂಚು ಪದಕ ವಿಜೇತೆ ಸಿಂಧು ಇದೀಗ ಮುಂದಿನ ಸುತ್ತಿನಲ್ಲಿ ಮತ್ತೊಂದು ಕಠಿಣ ಸವಾಲು ಎದುರಿಸಬೇಕಿದೆ.

ಒಲಿಂಪಿಕ್ಸ್ ಚಾಂಪಿಯನ್ ಹಾಗೂ ವಿಶ್ವದ ಮಾಜಿ ನಂ.1 ಆಟಗಾರ್ತಿ ಚೀನಾದ ಲೀ ಕ್ಸುರೇಯಿ ಎದುರು ಪ್ರೀ-ಕ್ವಾರ್ಟರ್ ಫೈನಲ್‍ನಲ್ಲಿ ಅವರು ಸೆಣಸಲಿದ್ದಾರೆ. ಇನ್ನು ರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಕಿಡಾಂಬಿ ಶ್ರೀಕಾಂತ್ ಸುಲಭ ಗೆಲುವಿನೊಂದಿಗೆ ಮುಂದಡಿ ಇಟ್ಟರು. ಆಸ್ಟ್ರೇಲಿಯಾದ ಮೈಕಲ್ ಫೇರ್‍ಮನ್ 21-10, 21-13ರಿಂದ ಜಯ ಸಾಧಿಸಿದರು. ಮುಂದಿನ ಹಂತದಲ್ಲಿ ಚೈನೀಸ್ ತೈಪೆಯ ಹ್ಸೂಜೆನ್ ಹಾವೊ ವಿರುದ್ಧ ಕಾದಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com