
ಬೆಂಗಳೂರು: ಟೂರ್ನಿಯಲ್ಲಿ ಸತತ ಮೂರು ಸೋಲಿನೊಂದಿಗೆ ತನ್ನ ಸೆಮಿ ಫೈನಲ್ ಹಾದಿಯನ್ನು ಕಠಿಣವಾಗಿ ಸಿಕೊಂಡಿದ್ದ ಬೆಂಗಳೂರು ಬುಲ್ಸ್ ತಂಡ, ತವರಿನ ಅಂಗಣದಲ್ಲಿನ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಆಸೆ ಜೀವಂತ ವಾಗಿರಿಸಿಕೊಂಡಿದೆ.
ಶುಕ್ರವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 47ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 40-21 ಅಂಕಗಳ ಅಂತರದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ
ಜಯಿಸಿತು. ತವರಿನ ಆರಂಬಿsಕ 2 ಪಂದ್ಯದಲ್ಲಿಯು ಮುಂಬಾ ಹಾಗೂ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತಿದ್ದ ಬೆಂಗಳೂರು ಬುಲ್ಸ್, ಈ ಗೆಲುವಿನ ಮೂಲಕ ತವರಿನ ಪ್ರೇಕ್ಷಕರ ಮನ ತಣಿಸುವಲ್ಲಿ ಯಶಸ್ವಿಯಾಯಿತು.
ಬಂಗಾಳಕ್ಕೆ ಜಯ: ಸೆಮಿಫೈನಲ್ ಆಸೆ ಜೀವಂತ ವಾಗಿರಿಸಿಕೊಳ್ಳುವ ಹಠದಿಂದ ಕಣಕ್ಕಿಳಿದ ಪಾಟ್ನಾ ಪೈರೆಟ್ಸ್, ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದು ತನ್ನ ಪ್ರಯತ್ನದಲ್ಲಿ ಯಶ ಕಂಡಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರಟ್ಸ್ ತಂಡ 34-32 ಅಂಕಗಳ ಅಂತರದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
Advertisement