
ಕೋಲ್ಕತಾ: ದೇಶದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಅರ್ಜುನ ಪ್ರಶಸ್ತಿಗೆ ಪ್ರಶಸ್ತಿ ಸಮಿತಿ ತಮ್ಮ ಹೆಸರನ್ನು ತಿರಸ್ಕರಿಸಿರುವುದರಿಂದ ತೀವ್ರ ಬೇಸರಗೊಂಡಿರುವ ಖ್ಯಾತ ಸ್ನೂಕರ್ ಆಟಗಾರ ಸೌರವ್ ಕೊಠಾರಿ, ಪ್ರಶಸ್ತಿಗೆ ತಮ್ಮ ಹೆಸರನ್ನು ಸೇರಿಸುವಂತೆ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್ ಅವರಿಗೆ ಮನವಿ ಮಾಡಿದ್ದಾರೆ.
``ಅರ್ಜುನ ಪ್ರಶಸ್ತಿಗಾಗಿ ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿದ್ದರೂ, ಕೊನೇ ಕ್ಷಣದಲ್ಲಿ ಕೈಬಿಟ್ಟಿರುವುದರಿಂದ ನಿರಾಸೆ ತರಿಸಿದೆ.
ಹೀಗಾಗಿ ಕ್ರೀಡಾಸಚಿವಾಲಯ ಪಟ್ಟಿಯನ್ನು ಪುನರ್ ಪರಿಶೀಲಿಸಬೇಕು ಎಂದು ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ ಕೊಠಾರಿ ತಿಳಿಸಿರುವುದಾಗಿ ಸಿಎನ್ ಎನ್ ಐಬಿಎನ್ ವರದಿ ಮಾಡಿದೆ.
Advertisement