ಸತ್ನಮ್ ಸಿಂಗ್
ಕ್ರೀಡೆ
ಭಾರತ ಬಾಸ್ಕೆಟ್ ಬಾಲ್ ಗೆ ಹಣ ಬೇಕಿದೆ: ಸತ್ನಮ್
ಭಾರತದಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆ ತನ್ನ ಅಸ್ತಿತ್ವ ಕಂಡುಕೊಳ್ಳಲು ಹಣ ಹಾಗೂ ಮೂಲಸೌಕರ್ಯಗಳ ಅಗತ್ಯತೆ ಇದೆ ಎಂದು ಪ್ರತಿಷ್ಠಿತ ಎನ್ಬಿಎ ಟೂರ್ನಿಯಲ್ಲಿ ಆಡಿದ...
ನವದೆಹಲಿ: ಭಾರತದಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆ ತನ್ನ ಅಸ್ತಿತ್ವ ಕಂಡುಕೊಳ್ಳಲು ಹಣ ಹಾಗೂ ಮೂಲಸೌಕರ್ಯಗಳ ಅಗತ್ಯತೆ ಇದೆ ಎಂದು ಪ್ರತಿಷ್ಠಿತ ಎನ್ಬಿಎ ಟೂರ್ನಿಯಲ್ಲಿ ಆಡಿದ ಮೊಟ್ಟಮೊದಲ ಭಾರತೀಯ ಆಟಗಾರ ಎನಿಸಿದ ಸತ್ನಮ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಡಲ್ಲಾಸ್ ಮಾವೆರಿಕ್ಸ್ ತಂಡದ ಪರ ಆಡಿದ 19 ವರ್ಷದ ಆಟಗಾರ ಸತ್ನಮ್, ದೇಶದಲ್ಲಿ ಕ್ರೀಡೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾಣಲು ಸರ್ಕಾರದ ನೆರವು ಬೇಕಿದೆ ಎಂದಿದ್ದಾರೆ.
ದೇಶದಲ್ಲಿನ ಎಲ್ಲ ಹಂತದ ಯುವ ಪ್ರತಿಭೆಗಳಿಗೆ ನೆರವಿನ ಅಗತ್ಯವಿದೆ. ಇವರಿಗೆ ಉತ್ತಮ ಕೋಚ್ ಗಳು ಹಾಗೂ ತರಬೇತಿ ಮುಖ್ಯ. ಪೋಷಕಾಂಶಯುತ ಆಹಾರ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಹಾಗಾಗಿ ಇಂಥವರಿಗೆ ಸರ್ಕಾರ ನೆರವು ನೀಡಬೇಕು. ಅಮೆರಿಕದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಅವರಿಗೆ ಸ್ಥಿರವಾಗಿ ಆರ್ಥಿಕ ನೆರವು ಲಭಿಸುತ್ತದೆ. ಪ್ರತಿಭೆಗಳಿಗೆ ಆರ್ಥಿಕ ಸಮಸ್ಯೆ ಎದುರಾದರೆ, ಯಶಸ್ಸು ಸಾಧಿಸುವುದು ಕಷ್ಟ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ