ದೀಪಿಕಾ ಕುಮಾರಿ
ಕ್ರೀಡೆ
ಬೆಳ್ಳಿಗೆ ತೃಪ್ತಿಪಟ್ಟ ಭಾರತ
ಆರ್ಚರಿ ವಿಶ್ವಕಪ್ ಚಾಂಪಿಯನ್‍ಶಿಪ್ ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಸಿಗುವ ನಿರೀಕ್ಷೆ ಹುಸಿ...
ವ್ರೊಕ್ಲಾವ್ (ಪೋಲೆಂಡ್): ಆರ್ಚರಿ ವಿಶ್ವಕಪ್ ಚಾಂಪಿಯನ್‍ಶಿಪ್ ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಸಿಗುವ ನಿರೀಕ್ಷೆ ಹುಸಿಯಾಗಿದೆ.
ಭಾನುವಾರ ನಡೆದ ತಂಡಗಳ ವಿಭಾಗದಲ್ಲಿ ಮಿಶ್ರ ರಿಕರ್ವ್ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಹಾಗೂ ಮಂಗಳ್ ಸಿಂಗ್ ಅವರುಳ್ಳ ಭಾರತೀಯ ತಂಡ, ಮೆಕ್ಸಿಕೋದ ಐಡಾ ರೋಮನ್ ಹಾಗೂ ಜುವಾನ್ ರೆನೆ ಸೆರ್ರಾನೊ ಜೋಡಿ ವಿರುದ್ಧ 1-5 ಅಂಕಗಳ ಅಂತರದಲ್ಲಿ ಸೋಲು ಕಂಡಿತು.
ಶನಿವಾರ ನಡೆದಿದ್ದ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದ ಪದಕ ಸುತ್ತಿನಲ್ಲಿ ಭಾರತದ ಅಭಿಷೇಕ್ ವರ್ಮಾ ಚಿನ್ನದ ಪದಕ ಗೆದ್ದಿದ್ದರು. ಹಾಗಾಗಿ, ಭಾನುವಾರ ನಡೆಯಲಿದ್ದ ಮಿಶ್ರ ರಿಕವ್ರ್ನ ಅಂತಿಮ ಸುತ್ತಿನ ಪಂದ್ಯದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಆದರೆ, ಈ ನಿರೀಕ್ಷೆ ಹುಸಿಯಾಯಿತು.

