ರೋಜರ್ಸ್ ಕಪ್: ಜೊಕೊವಿಚ್ ಮಣಿಸಿ ಪ್ರಶಸ್ತಿ ಗೆದ್ದ ಮರ್ರೆ

ವಿಶ್ವದ ನಂಬರ್‍ಒನ್ ಟೆನಿಸಿಗ ನೊವಾಕ್ ಜೊಕೊವಿಚ್ ಅವರೊಂದಿಗೆ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಹೊಂದಿದ್ದ ಸೋಲಿನ ಸರಪಳಿ ಕೊನೆಗೂ ತುಂಡಾಗಿದೆ...
ಆ್ಯಂಡಿ ಮರ್ರೆ
ಆ್ಯಂಡಿ ಮರ್ರೆ
Updated on
ಟೊರಂಟೊ(ಕೆನಡಾ): ವಿಶ್ವದ ನಂಬರ್‍ಒನ್ ಟೆನಿಸಿಗ ನೊವಾಕ್ ಜೊಕೊವಿಚ್ ಅವರೊಂದಿಗೆ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಹೊಂದಿದ್ದ ಸೋಲಿನ ಸರಪಳಿ ಕೊನೆಗೂ ತುಂಡಾಗಿದೆ! 
ಭಾನುವಾರ ರಾತ್ರಿ ನಡೆದ ರೋಜರ್ಸ್ ಓಪನ್ ಟೆನಿಸ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ಜೊಕೊವಿಚ್ ಅವರನ್ನು 6-4, 4-6 ಹಾಗೂ 6-3 ಸೆಟ್‍ಗಳ ಅಂತರದಲ್ಲಿ ಮಣಿಸಿದ ಮರ್ರೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮರ್ರೆ ಪಾಲಿಗೆ ಮಾಂಟ್ರಿಯಲ್ ಅಂಗಣ ಅದೃಷ್ಟದ ನೆಲವಾಗಿ ಪರಿಣಮಿಸಿದ್ದು, ಸುಮಾರು ಮೂರು ಗಂಟೆಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಬ್ರಿಟನ್ ಟೆನಿಸಿಗನಿಗೆ ವಿಜಯ ಮಾಲೆ ಒಲಿದಿದೆ.  ಇದಕ್ಕಿಂತಲೂ ಕುತೂಹಲ ವಿಚಾರವೆಂದರೆ, ಕಳೆದ 25  ತಿಂಗಳುಗಳಲ್ಲಿ ನಡೆದಿದ್ದ ಸತತ ಎಂಟು ಮುಖಾಮುಖಿಯಲ್ಲಿ ಜೊಕೊವಿಚ್ ವಿರುದ್ಧ ಮರ್ರೆ ಸೋಲು ಕಂಡಿದ್ದರು. 2013ರ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ನೊವಾಕ್ ಅವರನ್ನು ಮಣಿಸಿದ್ದೇ ಕೊನೆ.  
ಅಲ್ಲಿಂದ ಇಲ್ಲಿಯವರೆಗೂ ನೊವಾಕ್ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿ ಸೋಲು ಮರ್ರೆ ಪಾಲಿಗೆ ಕಟ್ಟಿಟ್ಟ ಬುತ್ತಿ ಎಂಬಂತಾಗಿತ್ತು. ಆದರೆ, ಈ ಸೋಲಿನ ಸಾಲಿಗೆ ಭಾನುವಾರ ಮರ್ರೆ ಪೂರ್ಣ ವಿರಾಮ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com