
ಬೆಂಗಳೂರು: ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರ ಅರ್ಜುನ ಪ್ರಶಸ್ತಿ ಪಟ್ಟಿಯಿಂದ ಕರ್ನಾಟಕದ ಚಿತ್ರಾ ಮಗಿಮೈರಾಜ್ ಮತ್ತು ಸೌರವ್ ಕೋಠಾರಿ ಅವರ ಹೆಸರನ್ನು ಕೈಬಿಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ದೇಶದ ಖ್ಯಾತ ಸ್ನೂಕರ್ ತಾರೆ ಪಂಕಜ್ ಅಡ್ವಾಣಿ, ಕೇಂದ್ರ ಸರ್ಕಾರ ನಮ್ಮನ್ನುಕಡೆಗಣಿಸಿದ್ದು ಸೂಕ್ತ ನೆರವು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕರಾಚಿಯಲ್ಲಿ ನಡೆದ ವಿಶ್ವ 6 ರೆಡ್ ಸ್ನೂಕರ್ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡು, ತಮ್ಮ ಮುಡಿಗೆ 13ನೇ ವಿಶ್ವ ಗರಿಯನ್ನುಸೇರಿಸಿಕೊಂಡಿದ್ದ ಪಂಕಜ್ ಆಡ್ವಾಣಿ ಅವರಿಗೆ ಸೋಮವಾರ ಕರ್ನಾಟಕ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ಸನ್ಮಾನ ಕಾರ್ಯಕ್ರಮಹಮ್ಮಿಕೊಂಡಿತ್ತು.ಈ ವೇಳೆ ಮಾತನಾಡಿದ ಪಂಕಜ್, ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಕ್ರೀಡೆಗಳು ಒಲಿಂಪಿಕ್ಸ್ ಕ್ರೀಡೆಗಳಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ. ಕೇವಲ ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ ಗಳನ್ನು ಗಮನದಲ್ಲಿಟ್ಟುಕೊಂಡು ಕ್ರೀಡೆಗೆ ಮಹತ್ವ ನೀಡುತ್ತೀರಾ? ಒಲಿಂಪಿಕ್ಸ್ ನಲ್ಲಿನ ಸಾಧನೆ ಆಧಾರದ ಮೇಲೆ ಕ್ರೀಡೆಯ ಮಹತ್ವವನ್ನು ಅಳೆಯಬಾರದು. ಈ ನಿರ್ಧಾರಗಳನ್ನು ಯಾರು ಕೈಗೊಳ್ಳುತ್ತಾರೆ ಎಂಬುದು ಗೊತ್ತಿಲ್ಲ. ಆ ದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಆಗ್ರಹಿಸಿದರು.ಈ ಕ್ರೀಡೆಯ ಆಟಗಾರರು ಸಹ ಇತರೆ ಕ್ರೀಡಾಪಟುಗಳಂತೆ ಅರ್ಹರುಎಂಬುದನ್ನು ಸರ್ಕಾರ ಅರಿಯಬೇಕಿದೆ. ಕ್ರೀಡೆಯ ಅಭಿವೃದ್ಧಿಗೆಯೋಜನೆ ಜಾರಿಗೆ ತಂದರೆ, ನಮ್ಮನ್ನು ಸಹ ಪರಿಗಣಿಸಬೇಕು. ನಾವು ಸಹ
ಇತರೆ ಕ್ರೀಡಾಪಟುಗಳಂತೆ ಉತ್ತಮ ಸಾಧನೆ ಮಾಡಿದ್ದೇವೆ ಎಂದರು.
Advertisement