
ಸಿನ್ಸಿನಾಟಿ: ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ತಮ್ಮ ಟೆನಿಸ್ ಡಬಲ್ಸ್ ವೃತ್ತಿ ಜೀವನದಲ್ಲಿ ಮತ್ತೊಮ್ಮೆ ತಮ್ಮ ಜೊತೆಗಾರನನ್ನು ಬದಲಿಸಿದ್ದಾರೆ.ಇದೀಗ ಅವರ ಜತೆಗಾರರಾಗುತ್ತಿರುವ ಸ್ವಿಜರ್ಲೆಂಡ್ ಸ್ಟಾನಿಸ್ಲಾಸ್ ವಾವ್ರಿಂಕಾ ಅವರು, ಪೇಸ್ ಅವರ 102ನೇ ಜೊತೆಗಾರರಾಗಿದ್ದಾರೆ! ಕಳೆದ ವಾರವಷ್ಟೇ ಮಾಂಟ್ರಿಯನ್ ಓಪನ್ ಟೂರ್ನಿಯಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್, ಬ್ರಿಟನ್‍ನ ಆ್ಯಂಡಿ ಮರ್ರೆ ಜೊತೆಗೆ ಕಣಕ್ಕಿಳಿದಿದ್ದ ಅವರು, ಸೋಮವಾರ ಆರಂಭಗೊಂಡಸಿನ್ಸಿನಾಟಿ ಟೆನಿಸ್ ಟೂರ್ನಿಯಲ್ಲಿ ಹಾಲಿ ಫ್ರೆಂಚ್ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ ಜೊತೆಯಲ್ಲಿ ಅವರು ಕಣಕ್ಕಿಳಿಯುವುದು ಖಚಿತವಾಗಿದೆ. 2008ರಲ್ಲಿ ರೋಜರ್ ಫೆಡರರ್ ಜೊತೆಗೂಡಿ ಒಲಿಂಪಿಕ್ಸ್ ನ ಟೆನಿಸ್ ಡಬಲ್ಸ್ ನಲ್ಲಿ ಚಾಂಪಿಯನ್ ಆಗಿದ್ದ ವಾವ್ರಿಂಕಾ ಹಾಗೂ ಲಿಯಾಂಡರ್, ತಮ್ಮ ಮೊದಲಸುತ್ತಿನ ಪಂದ್ಯದಲ್ಲಿ ಕೆವಿಮ್ ಆ್ಯಂಡರ್ಸನ್ ಹಾಗೂ ಜೆರೆಮಿ ಚಾರ್ಡಿಯವರನ್ನು ಎದುರಿಸಲಿದ್ದಾರೆ. ಇನ್ನು, ಇದೇ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ರೋಹನ್ ಬೋಪಣ್ಣ ಹಾಗೂ ಫ್ಲಾರಿನ್ ಮಜರ್ಜಿಯಾ ಜೋಡಿ ಟೂರ್ನಿಯವಲ್ವಿ 5 ನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನ ಪಂದ್ಯದಿಂದ ಬೈ ಪಡೆದಿದ್ದಾರೆ. ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ಮಾರ್ಟಿನಾಹಿಂಗಿಸ್ ಜೋಡಿಗೂ ಈ ಪಂದ್ಯಾವಳಿಯಲ್ಲಿ ಅಗ್ರಶ್ರೇಯಾಂಕ ಸಿಕ್ಕಿದ್ದು, ಮೊದಲ
ಪಂದ್ಯದಿಂದ ಬೈ ಸಿಕ್ಕಿದೆ.
Advertisement