
ಆಗ್ರಾ: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆರ್ಮಿ ಟೆರಿಟೋರಿಯಲ್ ತರಬೇತಿಯಲ್ಲಿ ಮೊದಲ ಬಾರಿಗೆ ಪ್ಯಾರಾಚೂಟ್ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಸುಮಾರು ಹತ್ತು ಸಾವಿರ ಅಡಿ ಎತ್ತರದಿಂದ ಧೋನಿ ಜಂಪ್ ಮಾಡಿದ್ದಾರೆ. ಕಳೆದ ಆಗಸ್ಟ್ 6ರಿಂದ ಮಹೇಂದ್ರ ಸಿಂಗ್ ಧೋನಿ ಪ್ಯಾರಾ ಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್(ಪಿಟಿಎಸ್)ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಎನ್ 32 ಏರ್ ಕ್ರಾಫ್ಟ್ ನಿಂದ ಪ್ಯಾರಾಚೂಟ್ ಕಟ್ಟಿಕೊಂಡು ಜಂಪ್ ಮಾಡಿದ ಧೋನಿ ಬಳಿಕ ಆಗ್ರಾ ಸಮೀಪದ ಮಾಲ್ ಪುರಾ ವಲಯದಲ್ಲಿ ಬಂದಿಳಿದಿದ್ದಾರೆ.
ನುರಿತ ಪ್ಯಾರಾ ಜಂಪರ್ ಮೂಲಕ ತರಬೇತಿ ಪಡೆದ ಧೋನಿ ಸುಮಾರು 10 ಸಾವಿರ ಅಡಿ ಎತ್ತರದಿಂದ ಪ್ಯಾರಚೂಟ್ ಮೂಲಕ ಜಂಪ್ ಮಾಡಿದ್ದರು. ಧೋನಿ ಅವರನ್ನು 106 ಪ್ಯಾರಾಚೂಟ್ ರೆಜಿಮೆಂಟ್ ಆಫ್ ದ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಪಡೆದಿದ್ದಾರೆ. ಬಳಿಕ ಪದವಿಗಾಗಿ ತರಬೇತಿ ಪಡೆಯಲು ಧೋನಿ ನಿರ್ಧರಿಸಿದ್ದರು.
Advertisement