ಮುಂದುವರೆದ ಹರಿಣಗಳ ಪ್ರಾಬಲ

ಪ್ರವಾಸಿ ದ.ಆಫ್ರಿಕಾ `ಎ' ತಂಡದ ವಿರುದ್ಧದ ನಾಲ್ಕು ದಿನಗಳ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದಯನೀಯ...
ಭಾರತ ಎ v/s ದಕ್ಷಿಣಾ ಆಫ್ರಿಕಾ
ಭಾರತ ಎ v/s ದಕ್ಷಿಣಾ ಆಫ್ರಿಕಾ

ವಯನಾಡು: ಪ್ರವಾಸಿ ದ.ಆಫ್ರಿಕಾ `ಎ' ತಂಡದ ವಿರುದ್ಧದ ನಾಲ್ಕು ದಿನಗಳ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದಯನೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ `ಎ' ತಂಡ ಇದೀಗ ಸೋಲಿನ ಭೀತಿಗೆ ಸಿಲುಕಿದೆ.

ಇಲ್ಲಿನ ಕೃಷ್ಣಗಿರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಂಬಟಿ ರಾಯುಡು ಸಾರಥ್ಯದ ಭಾರತ `ಎ' ತಂಡದ ವಿರುದ್ಧ ಹರಿಣಗಳು ಸಂಪೂರ್ಣ ಪಾರಮ್ಯ ಮೆರೆದವು. ಮೊದಲ ಇನ್ನಿಂಗ್ಸ್‍ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಭಾರತ, ಎರಡನೇ ಇನ್ನಿಂಗ್ಸ್‍ನಲ್ಲಿಯೂ ಮುಗ್ಗರಿಸಿತು. 29 ಓವರ್‍ಗಳಲ್ಲಿ 2 ವಿಕೆಟ್‍ಗೆ 73 ರನ್ ಗಳಿಸಿರುವ ಅದು ಗೆಲುವಿಗೆ ಇನ್ನೂ 371 ರನ್‍ಗಳ ಭಾರೀ ಸವಾಲಿಗೆ ಗುರಿಯಾಗಿದೆ.

ಆರಂಭಿಕ ಜಿವನ್‍ಜೋತ್ ಸಿಂಗ್ (1 ರನೌಟ್) ಮತ್ತು ವಿಕೆಟ್‍ಕೀಪರ್ ಅಂಕುಶ್ ಬೇನ್ಸ್ 27 ರನ್ ಗಳಿಸಿ ಔಟಾದರು. ಮೂರನೇ ದಿನದಾಟ ನಿಂತಾಗ ಅಭಿನವ್ ಮುಕುಂದ್ ಹಾಗೂ ನಾಯಕ ಅಂಬಟಿ ರಾಯುಡು ಕ್ರಮವಾಗಿ 32 ಹಾಗೂ 27 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು.

ಡೇನ್ ಮಾರಕ ದಾಳಿ: ಮೊದಲ ಇನ್ನಿಂಗ್ಸ್‍ನಲ್ಲಿ 542 ರನ್ ಗೆ ಆಲೌಟ್ ಆಗಿದ್ದ ದ.ಆಫ್ರಿಕಾ `ಎ' ತಂಡದ ವಿರುದ್ಧ ಫಾಲೋ ಆನ್‍ನಿಂದ ಪಾರಾಗಲು 392 ರನ್ ಗಳಿಸಬೇಕಿದ್ದ ಭಾರತ `ಎ' ತಂಡ 3 ವಿಕೆಟ್‍ಗೆ 122 ರನ್ ಮಾಡಿತ್ತಲ್ಲದೆ, ಗುರುವಾರ ಆಟ ಮುಂದುವರೆಸಿ ತನ್ನ ಮೊದಲ ಇನ್ನಿಂಗ್ಸ್‍ಗೆ 66.3 ಓವರ್‍ಗಳಲ್ಲಿ 204 ರನ್ ಗಳಿಸುವುದರೊಂದಿಗೆ ಇತಿಶ್ರೀ ಹಾಡಿತು. ಸ್

ಪಿನ್ನರ್ ಡೇನ್ ಪೀಟ್ (85/4) ನಡೆಸಿದ ಮಾರಕ ದಾಳಿಗೆ ಕಂಗಾಲಾದ ಭಾರತ ತಂಡ ಸಂಪೂರ್ಣವಾಗಿ ಬ್ಯಾಟಿಂಗ್‍ನಲ್ಲಿ ವೈಫಲ್ಯತೆ ಅನುಭವಿಸಿತು. ಮೇಲಿನ ಮಾಂಕದಲ್ಲಿ ಮಧ್ಯಮ ಹಾಗೂ ಕೆಳ ಕ್ರಮಾಂಕಿತ ಆಟಗಾರರ ದಿವ್ಯ ವೈಫಲ್ಯ ತಂಡದ ದುಃಸ್ಥಿತಿಗೆ ಕಾರಣವಾಯಿತು. ತತ್ಪರಿಣಾಮ 338 ರನ್ ಮುನ್ನಡೆ ಪಡೆದ ದ.ಆಫ್ರಿಕಾ,ಫಾಲೋಆನ್ ಏರದೆ ಬ್ಯಾಟಿಂಗ್‍ಗಿಳಿಯಿತಲ್ಲದೆ, 35 ಓವರ್‍ಗಳಲ್ಲಿ ರೀಜಾ ಹೆನ್ರಿಕ್ಸ್ ಅವರ ಅರ್ಧಶತಕದ ನೆರವಿನೊಂದಿಗೆ 1 ವಿಕೆಟ್‍ಗೆ 105 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿತು.

ಸಂಕ್ಷಿಪ್ತ ಸ್ಕೋರ್:
ಭಾರತ ಎ ಮೊದಲ ಇನ್ನಿಂಗ್ಸ್ 66.3 ಓವರ್‍ಗಳಲ್ಲಿ 204 (ಜಿವನ್‍ಜೋತ್ 22, ಮುಕುಂದ್ 38, ಶ್ರೇಯಸ್ 49, ರಾಯುಡು 46; ಡೇನ್ ಪೀಟ್ 85ಕ್ಕೆ 5)
ದ.ಆಫ್ರಿಕಾ ಎ ಎರಡನೇ ಇನ್ನಿಂಗ್ಸ್ 35 ಓವರ್‍ಗಳಲ್ಲಿ 105/1 ಡಿಕ್ಲೇರ್ (ರೀಜಾ ಹೆನ್ರಿಕ್ಸ್ 61, ವಾನ್ ಜಿಲ್ 38*; ಅಕ್ಷರ್ ಪಟೇಲ್ 37ಕ್ಕೆ 1)
ಭಾರತ ಎ ಎರಡನೇ ಇನ್ನಿಂಗ್ಸ್ 29 ಓವರಗಳಲ್ಲಿ 2 ವಿಕೆಟ್‍ಗೆ 73 (ಮುಕುಂದ್ 32* ರಾಯುಡು 13*;ಮಹಾರಾಜ್ 24ಕ್ಕೆ 1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com