ಪ್ರಸಕ್ತ ಪ್ರೊ ಕಬಡ್ಡಿ ಲೀಗ್ ನ ಉಪಾಂತ್ಯ ಸುತ್ತಿಗೆ ಪ್ರವೇಶಿಸಿರುವ ಪಾಟ್ನಾ ತಂಡದ ನಾಯಕ ಸಂದೀಪ್ ನರ್ವಾಲ್, ಯು ಮುಂಬಾದ ಅನುಪ್ ಕುಮಾರ್, ಬೆಂಗಳೂರು ಬುಲ್ಸ್ ನ ಮಂಜೀತ್ ಚಿಲ್ಲರ್ ಮತ್
ಪ್ರಸಕ್ತ ಪ್ರೊ ಕಬಡ್ಡಿ ಲೀಗ್ ನ ಉಪಾಂತ್ಯ ಸುತ್ತಿಗೆ ಪ್ರವೇಶಿಸಿರುವ ಪಾಟ್ನಾ ತಂಡದ ನಾಯಕ ಸಂದೀಪ್ ನರ್ವಾಲ್, ಯು ಮುಂಬಾದ ಅನುಪ್ ಕುಮಾರ್, ಬೆಂಗಳೂರು ಬುಲ್ಸ್ ನ ಮಂಜೀತ್ ಚಿಲ್ಲರ್ ಮತ್

ಫೈನಲ್ ಕನವರಿಕೆಯಲ್ಲಿ ಬೆಂಗಳೂರು ಬುಲ್ಸ್

ಕಳೆದ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬೆಂಗಳೂರು ಬುಲ್ಸ್ ಈ ಬಾರಿ ಫೈನಲ್ ತಲುಪುವ ಗುರಿ ಹೊತ್ತಿದೆಯಲ್ಲದೆ...

ಮುಂಬೈ: ಕಳೆದ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬೆಂಗಳೂರು ಬುಲ್ಸ್ ಈ ಬಾರಿ ಫೈನಲ್ ತಲುಪುವ ಗುರಿ ಹೊತ್ತಿದೆಯಲ್ಲದೆ, ಅದರ ಕನವರಿಕೆಯಲ್ಲೇ ತುಂಬಿರುವ ಅದು ಪ್ರಬಲ ತೆಲುಗು ಟೈಟಾನ್ಸ್ ತಂಡವನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದೆ.

ಟೂರ್ನಿಯ ನಾಕೌಟ್ ಸುತ್ತಿನ ಪಂದ್ಯಗಳು ಮುಬೈನ ಎನ್‍ಎಸ್‍ಸಿಐ ಎಸ್‍ವಿಪಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶುಕ್ರವಾರ ಎರಡು ಸೆಮಿಫೈನಲ್ ಪಂದ್ಯಗಳು ಜರುಗಲಿವೆ. ಕಳೆದ ಬಾರಿ ಕೂದಲೆಳೆಯ ಅಂತರದಲ್ಲಿ ಸೆಮಿಫೈನಲ್ ಅವಕಾಶವನ್ನು ಕಳೆದುಕೊಂಡಿದ್ದ ತೆಲುಗು ಟೈಟಾನ್ಸ್, ಈ ಬಾರಿ ಅಗ್ರ ಎರಡನೇ ಸ್ಥಾನ ಪಡೆಯುವ ಮೂಲಕ ಉಪಾಂತ್ಯಕ್ಕೆ ಸುಲಭವಾಗಿ ಪ್ರವೇಶಿಸಿದೆ.

 ಉಳಿದಂತೆ ಬೆಂಗಳೂರು ಬುಲ್ಸ್, ಯು ಮುಂಬಾ ಹಾಗೂ ಪಾಟ್ನಾ ಪೈರೆಟ್ಸ್ ತಂಡಗಳು ಸತತ ಎರಡನೇ ಬಾರಿಗೆ ಉಪಾಂತ್ಯಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಕಳೆದ ಒಂದು ತಿಂಗಳಿನಿಂದ ಅಭಿಮಾನಿಗಳನ್ನು ರೋಚಕ ಕದನದಿಂದ ರಂಜಿಸಿದ್ದ ಪ್ರೊಕಬಡ್ಡಿ ಲೀಗ್ ಈಗ ನಾಕೌಟ್ ಸುತ್ತಿಗೆ ಬಂದು ನಿಂತಿದೆ. 56 ಪಂದ್ಯಗಳ ಲೀಗ್ ಹಂತದ ಪಯಣ ಭಾರಿ ಯಶಸ್ವಿಯಾಗಿದ್ದು, ಉಪಾಂತ್ಯದ ಸುತ್ತಿನಲ್ಲಿ ಪ್ರಬಲ ತಂಡಗಳ ಕಾದಾಟ ಅಭಿಮಾನಿಗಳಲ್ಲಿನ ನಿರೀಕ್ಷೆಯನ್ನು ಮುಗಿಲೆತ್ತರಕ್ಕೆ ಹೆಚ್ಚಿಸಿದೆ.

ಟೈಟಾನ್ಸ್ ಮೇಲೆ ಬುಲ್ಸ್ ಪ್ರಾಬಲ್ಯ: ಮೊದಲ ಉಪಾಂತ್ಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳ ಕಾದಾಟ ಹೆಚ್ಚು ನಿರೀಕ್ಷೆ ಹುಟ್ಟಿಸಿವೆ. ಕಾರಣ ಈ ಎರಡು ತಂಡಗಳು ಮುಖಾಮುಖಿಯಾದಾಗಲೆಲ್ಲಾ ಪಂದ್ಯದ ಫಲಿತಾಂಶ ರೋಚಕ ಘಟ್ಟಕ್ಕೆ ತಲುಪಿದೆ. ಹಾಗಾಗಿ ಈ ಕಾಳಗದಲ್ಲೂ ಉಭಯರ ಸೆಣಸಾಟ ತಾರಕಕ್ಕೇರುವ ಸಾಧ್ಯತೆಗಳು ಹೆಚ್ಚಾಗಿವೆ.

ಬುಲ್ಸ್ ಹಾಗೂ ಟೈಟಾನ್ಸ್ ಈವರೆಗೂ 4 ಬಾರಿ ಮುಖಾಮುಖಿಯಾಗಿದ್ದು, ಆ ಪೈಕಿ ಪ್ರಭುತ್ವ ಸಾಧಿಸಿದೆ. ಬೆಂಗಳೂರು ತಂಡ 3ರಲ್ಲಿ ಗೆಲುವು ದಾಖಲಿಸಿದ್ದರೆ, ಒಂದು ಪಂದ್ಯ ರೋಚಕ ಟೈ ಆಗಿರುವುದು ಈ ಎರಡು ತಂಡಗಳ ನಡುವಣ ತೀವ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿ. ಪ್ರಸಕ್ತ ಸಾಲಿನಲ್ಲಿ ತೆಲುಗು ಟೈಟಾನ್ಸ್ ತಂಡದ ಲಯ ಅತ್ಯುತ್ತಮವಾಗಿದೆ. ಆಡಿರುವ 14 ಲೀಗ್ ಪಂದ್ಯಗಳ ಪೈಕಿ 8ರಲ್ಲಿ ಜಯ, 3ರಲ್ಲಿ ಸೋಲು ಹಾಗೂ 3ರಲ್ಲಿ ರೋಚಕ ಟೈ ಫಲಿತಾಂಶ ಪಡೆದಿದೆ. ಇನ್ನು ಬೆಂಗಳೂರು ಬುಲ್ಸ್ ತಂಡ 14 ಪಂದ್ಯಗಳಿಂದ 9 ಗೆಲುವು ಹಾಗೂ 5 ಸೋಲು ಕಂಡಿದೆ. ಈ ಬಾರಿ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ಅತ್ಯದ್ಭುತ ಪ್ರದರ್ಶನ ತೋರಿದೆ.

ಟೈಟಾನ್ಸ್ ಪಡೆ, ಪುಣೆ ಹಾಗೂ ಮುಂಬೈ ವಿರುದ್ಧ ತಲಾ 21 ಅಂಕಗಳ ಅಂತರದಲ್ಲಿ ಹಾಗೂ ಪಾಟ್ನಾ ಪೈರೆಟ್ಸ್ ವಿರುದ್ಧ 22 ಅಂಕಗಳ ಭಾರೀ ಅಂತರದಿಂದ ಗೆದ್ದು ತನ್ನ ತಾಕತ್ತು ಪ್ರದರ್ಶಿಸಿದೆ. ಇನ್ನು ಬೆಂಗಳೂರು ಬುಲ್ಸ್ ತಂಡ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲೂ ಕ್ರಮವಾಗಿ 14 ಹಾಗೂ 14 ಅಂಕಗಳ ಅಂತರದಲ್ಲಿ ಮಣಿಸಿದೆ. ಅಲ್ಲದೆ ತೆಲುಗು ಟೈಟಾನ್ಸ್‍ಗಿಂತ ಹೆಚ್ಚು ಪಂದ್ಯಗಳಲ್ಲಿ ಜಯ ಸಂಪಾದಿಸಿದೆ.

ಉಭಯ ತಂಡಗಳು ರೈಡಿಂಗ್‍ಗಿಂತ ರಕ್ಷಣಾತ್ಮಕ ವಿಭಾಗದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹಾಗಾಗಿ ಉಭಯ ತಂಡಗಳ ರೈಡರ್‍ಗಳಿಗೆ ಸತ್ವ ಪರೀಕ್ಷೆ ಎದುರಾಗಲಿದೆ. ಬೆಂಗಳೂರು ಪರ ಅಜಯ್ ಠಾಕೂರ್ ಮತ್ತು ಟೈಟಾನ್ಸ್ ಪರ ರಾಹುಲ್ ಚೌಧರಿ ಪ್ರಮುಖ ರೈಡರ್‍ಗಳಾಗಿದ್ದಾರೆ. ಇನ್ನು ಬುಲ್ಸ್ ನಾಯಕ ಮಂಜೀತ್ ಚಿಲ್ಲರ್ ಹಾಗೂ ಟೈಟಾನ್ಸ್‍ನ ದೀಪಕ್ ನಿವಾಸ್ ಹೂಡ ಪ್ರಮುಖ ಆಲ್ರೌಂಡರ್ ಗಳಾಗಿದ್ದಾರೆ. ಹಾಗಾಗಿ ಉಭಯ ತಂಡಗಳು ಸಮಬಲ ಸಾಧಿಸಿರುವ ಹಿನ್ನೆಲೆಯಲ್ಲಿ ಪಂದ್ಯ ರೋಚಕತೆಯ ಆಗರವಾಗುವ ಸಾಧ್ಯತೆಯನ್ನು ಹುಟ್ಟುಹಾಕಿದೆ.

Related Stories

No stories found.

Advertisement

X
Kannada Prabha
www.kannadaprabha.com