ಕ್ವಾರ್ಟರ್ ಗೆ ರೋಜರ್ ಫೆಡರರ್, ಹೊರಬಿದ್ದ ನಡಾಲ್
ಸಿನ್ಸಿನಾಟಿ: ಹಾಲಿ ಚಾಂಪಿಯನ್ ರೋಜರ್ ಫೆಡರರ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದು, ವೆಸ್ಟರ್ನ್ ಮತ್ತು ಸದರನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ರೋಜರ್ ಫೆಡರರ್ ತಮ್ಮ ಪ್ರತಿಸ್ಪರ್ಧಿ ದ.ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ 6-1, 6-1 ನೇರ ಸೆಟ್ ಗಳ ಸುಲಭ ಗೆಲವು ದಾಖಲಿಸಿದರು. ಇನ್ನು ಆಗ್ರ ಶ್ರೇಯಾಂಕಿತ ರಾಫೆಲ್ ನಡಾಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಇದೇ ವೇಳೆ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್, ಆ್ಯಂಡಿಮರ್ರೆ ಮತ್ತು ಸ್ಟಾನಿಸ್ಲಾಸ್ ವಾವ್ರಿಂಕಾ ಸಹ ಮುಂದಿನ ಸುತ್ತಿಗೆ ಪ್ರವೇಶಿದ್ದಾರೆ. ಲೋಪೆಜ್ ತಮ್ಮ ಪಂದ್ಯದಲ್ಲಿ ಮಾಜಿ ಚಾಂಪಿಯನ್ ರಾಫೆಲ್ ನಡಾಲ್ ರನ್ನು 5-7, 6-4, 7-6 (3) ಸೆಟ್ ಗಳ ಅಂತರದಲ್ಲಿ ಮಣಿಸಿದರು.
ಬೋಪಣ್ಣ ಜೋಡಿಗೆ ಜಯ; ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲೋರಿನ ಮರ್ಜಿಯಾ ಜೋಡಿ ಫ್ರೆಂಚ್ ನ ಪಾರೆ ಹ್ಯೂಸ್ ಹರ್ಬಟ್ ಮತ್ತು ನಿಕೋಲಸ್ ಮಹುತ್ ಜೋಡಿ ವಿರುದ್ಧ 1-6, 7-6 (5), 13-11 ಸೆಟ್ ಗಳ ಅಂತರದಲ್ಲಿ ಗೆಲುವು ದಾಖಲಿಸಿ ಟೂರ್ನಿಯ ಅಂತಿಮ ಎಂಟರ ಘಟ್ಟ ತಲುಪಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ