ಭಾನುವಾರ ಪ್ರೊ ಕಬಡ್ಡಿ ಫೈನಲ್‌: ಬೆಂಗಳೂರಿಗೆ ಒಲಿಯಲಿದೆಯೇ ಪ್ರಶಸ್ತಿ?

ದೇಶಾದ್ಯಂತ ಕ್ರೀಡಾಭಿಮಾನಿಗಳಲ್ಲಿ ಭಾರೀ ಕಾತರ ಹು ಟ್ಟಿಸಿರುವ ಪ್ರೊ ಕಬಡ್ಡಿ ಲೀಗ್‌-2ನ ಅಂತಿಮ ಪಂದ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ದೇಶಾದ್ಯಂತ ಕ್ರೀಡಾಭಿಮಾನಿಗಳಲ್ಲಿ ಭಾರೀ ಕಾತರ ಹು ಟ್ಟಿಸಿರುವ ಪ್ರೊ ಕಬಡ್ಡಿ ಲೀಗ್‌-2ನ ಅಂತಿಮ ಪಂದ್ಯ ರವಿವಾರ ನಡೆಯಲಿದೆ.

ಫೈನಲ್‌ನಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳ ಕದನ ಅಭಿಮಾನಿಗಳಿಗೆ ರೋಚಕ ಮನೋರಂಜನೆಯ ರಸದೌತಣ ಉಣಬಡಿಸುವುದರಲ್ಲಿ ಅನುಮಾನವಿಲ್ಲ. ಇಂದು ರಜಾ ದಿನವಾದ್ದರಿಂದ ಎಲ್ಲರೂ ಟಿವಿ ಮುಂದೆ ರಾತ್ರಿ 9 ಗಂಟೆಗೆ ಕುಳಿತು ಪಂದ್ಯವನ್ನು ವೀಕ್ಷಿಸುವ ಕಾತರದಲ್ಲಿದ್ದಾರೆ.

ಪ್ರಶಸ್ತಿ ಕನಸಲ್ಲಿ ಬೆಂಗಳೂರು
ಮೊದಲ ಆವೃತ್ತಿಯ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ್ದ ಬೆಂಗಳೂರು ಬುಲ್ಸ್‌ ಈ ಬಾರಿ ಫೈನಲ್‌ ತನಕ ಬಂದು ನಿಂತಿದೆ. ಈ ಪಂದ್ಯ ಗೆದ್ದು ಟ್ರೋಫಿ ಗೆಲ್ಲುವುದು ಮಂಜಿತ್‌ ಚಿಲ್ಲರ್‌ ನೇತೃತ್ವದ ಬೆಂಗಳೂರು ತಂಡದ ಗುರಿಯಾಗಿದೆ.

ಅನೂಪ್‌ ನೇತೃತ್ವದ ಮುಂಬಾ ತಂಡ ಕಳೆದ ವರ್ಷ ಫೈನಲ್‌ ಪ್ರವೇಶಿಸಿತ್ತು. ಈ ವರ್ಷ ಎರಡನೇ ಬಾರಿಗೆ ಫೈನಲ್‌ ಗೆ ಬಂದಿದೆ. ಕಳೆದ ವರ್ಷ ಫೈನಲ್‌ನಲ್ಲಿ ಜೈಪುರ ವಿರುದ್ಧ ಸೋತಿದ್ದ ಮುಂಬಾ ಈ ಬಾರಿ ಜಾಗೃತವಾಗಿದೆ. ಮುಂಬಾ ತಂಡದಲ್ಲಿ ಅನೂಪ್ ಕುಮಾರ್, ಶಬೀರ್ ಬಾಬು ಮತ್ತು ರಿಶಾಂಕ್ ದೇವಾಡಿಗ ಇರುವುದು ಬುಲ್ಸ್ ಜೊತೆಗೆ ಆಕ್ರಮಣಕಾರಿ ಆಟಕ್ಕೆ ಸಹಾಯವಾಗಿದೆ.

ಚಾಂಪಿಯನ್ ಆಗಿ ಹೊರಹೊಮ್ಮಿದವರಿಗೆ 1 ಕೋಟಿ ರೂಪಾಯಿ ಹಾಗೂ ರನ್ನರ್ ಅಪ್ ಗೆ 50 ಲಕ್ಷ ರೂಪಾಯಿ ಬಹುಮಾನ ದೊರಕಲಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನ ಗಳಿಸಿದವರಿಗೆ 30 ಲಕ್ಷ ಮತ್ತು 20 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com