ಶಿವಪ್ರಕಾಶ್, ಜೇಮ್ಸ್ ಗೆ ಧ್ಯಾನ್‍ಚಂದ್ ಗೌರವ

ಪ್ರತಿಷ್ಠಿತ ಧ್ಯಾನ್‍ಚಂದ್ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿದ್ದ ಹಾಕಿ ತರಬೇತುದಾರ ರೋಮಿಯೋ ಜೇಮ್ಸ್, ಟೆನಿಸ್ ತರಬೇತುದಾರ ಶಿವಪ್ರಕಾಶ್ ಮಿಶ್ರಾ ಹಾಗೂ ವಾಲಿಬಾಲ್ ತರಬೇತುದಾರ ಟಿಪಿಪಿ ನಾಯರ್...
ಟೆನಿಸ್ ತರಬೇತುದಾರ ಶಿವಪ್ರಕಾಶ್ ಮಿಶ್ರಾ (ಸಂಗ್ರಹ ಚಿತ್ರ)
ಟೆನಿಸ್ ತರಬೇತುದಾರ ಶಿವಪ್ರಕಾಶ್ ಮಿಶ್ರಾ (ಸಂಗ್ರಹ ಚಿತ್ರ)

ನವದೆಹಲಿ: ಪ್ರತಿಷ್ಠಿತ ಧ್ಯಾನ್‍ಚಂದ್ ಪ್ರಶಸ್ತಿಗಾಗಿ ಆಯ್ಕೆ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿದ್ದ ಹಾಕಿ ತರಬೇತುದಾರ ರೋಮಿಯೋ ಜೇಮ್ಸ್, ಟೆನಿಸ್ ತರಬೇತುದಾರ ಶಿವಪ್ರಕಾಶ್ ಮಿಶ್ರಾ ಹಾಗೂ ವಾಲಿಬಾಲ್ ತರಬೇತುದಾರ ಟಿಪಿಪಿ ನಾಯರ್ ಹೆಸರುಗಳನ್ನು ಕೇಂದ್ರ ಕ್ರೀಡಾ ಇಲಾಖೆ ಅಧಿಕೃತವಾಗಿ ಅಂಗೀಕರಿಸಿದೆ.

ಇದರೊಂದಿಗೆ, ದ್ರೋಣಾಚಾರ್ಯ ಪ್ರಶಸ್ತಿಗಾಗಿ ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಕುಸ್ತಿ ತರಬೇತುದಾರ ಅನೂಪ್ ಸಿಂಗ್, ಪ್ಯಾರಾಲಿಂಪಿಕ್ಸ್ ತರಬೇತುದಾರ ನಾವಲ್ ಸಿಂಗ್ ಸೇರಿದಂತೆ ಐವರ ಹೆಸರುಗಳನ್ನೂ ಸಚಿವಾಲಯ ಅಂಗೀಕರಿಸಿದ್ದು, ಇದೇ ತಿಂಗಳ 29ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿ: ಇನ್ನು ಈಜು ತರಬೇತುದಾರ ನಿಹಾರ್ ಅಮಿನ್, ಬಾಕ್ಸಿಂಗ್ ತರಬೇತುದಾರ ಎಸ್.ಆರ್. ಸಿಂಗ್ ಹಾಗೂ ಅಥ್ಲೆಟಿಕ್ಸ್ ತರಬೇತುದಾರ ಹರ್ಬನ್ಸ್ ಸಿಂಗ್
ಅವರು ಜೀವಮಾನ ಸಾಧನಾ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ದ್ರೋಣಾಚಾರ್ಯ ಹಾಗೂ ಧ್ಯಾನ್ ಚಂದ್ ಪ್ರಶಸ್ತಿ ಪಡೆಯುವ ಸಾಧಕರು, ನೆನಪಿನ ಕಾಣಿಕೆಯೊಂದಿಗೆ ಪ್ರಶಸ್ತಿ ಫಲಕ ಹಾಗೂ ರು.5 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ. ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್ ಪ್ರಶಸ್ತಿ ವಿಜೇತರು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಫಲಕ ಪಡೆಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com