ಬೋಲ್ಟ್ v/s ಗ್ಯಾಟ್ಲಿನ್

ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿರುವ ಜಮೈಕನ್ ಓಟಗಾರ ಉಸೇನ್ ಬೋಲ್ಟ್ (9.79) ಹಾಗೂ ಕೇವಲ 1 ಸೆಕೆಂಡಿನ...
ಉಸೇನ್ ಬೋಲ್ಟ್ - ಜಸ್ಟಿನ್ ಗ್ಯಾಟ್ಲಿನ್
ಉಸೇನ್ ಬೋಲ್ಟ್ - ಜಸ್ಟಿನ್ ಗ್ಯಾಟ್ಲಿನ್

ಬೀಜಿಂಗ್: ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿರುವ ಜಮೈಕನ್ ಓಟಗಾರ ಉಸೇನ್ ಬೋಲ್ಟ್ (9.79) ಹಾಗೂ ಕೇವಲ 1 ಸೆಕೆಂಡಿನ ಅಂರದಿಂದ ಸ್ವರ್ಣ ಪದಕದಿಂದ ವಂಚಿತರಾದ ಅಮೇರಿಕನ್ ಸ್ಪ್ರಿಂಟರ್ ಜಸ್ಟಿನ್ ಗ್ಯಾಟ್ಲಿನ್ ಪೈಪೋಟಿ ಮುಂದುವರೆದಿದೆ.

​ಕೂಟದ ನಾಲ್ಕನೇ ದಿನದಂದು ನಡೆದ 200 ಮೀಟರ್ ಹೀಟ್ಸ್ ನಲ್ಲಿ ಸೆಮಿ ಫೈನಲ್‍ಗೆ ಅರ್ಹತೆ ಪಡೆದುಕೊಂಡ ಈ ಈರ್ವರೂ ಗುರುವಾರ ನಡೆಯಲಿರುವ ಫೈನಲ್ ನಲ್ಲಿ ಮಿಂಚು ಹರಿಸಲು ಭರ್ಜರಿ ತಯಾರಿ ನಡೆಸಿದರು.

ಅಂದಹಾಗೆ ಮಂಗಳವಾರ ನಡೆದ ಹೀಟ್ಸ್‍ನಲ್ಲಿ ಬೋಲ್ಟ್ 20.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ, ಈ ಋತುವಿನಲ್ಲಿ 200 ಮೀಟರ್ ಓಟದಲ್ಲಿ ಪ್ರಭುತ್ವ ಮೆರೆದಿರುವ ಗ್ಯಾಟ್ಲಿನ್, ಇದೀಗ 200 ಮೀಟರ್ ಓಟದಲ್ಲಿ ಬೋಲ್ಟ್ ಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದು, ಗುರುವಾರ ನಡೆಯಲಿರುವ ಫೈನಲ್ ಕುತೂಹಲ ಕೆರಳಿಸಿದೆ.

ರುದರ್ ಪೋರ್ಡ್‍ಗೆ ಚಿನ್ನ:
ಇನ್ನು ಇಲ್ಲಿನ ಬಡ್ರ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ಪುರುಷರ ಲಾಂಗ್‍ಜಂಪ್ ಸ್ಪರ್ಧೆಯ ಎರಡನೇ ಯತ್ನದಲ್ಲಿ 8.29 ಮೀಟರ್ ದೂರ ಜಿಗಿದ ಇಂಗ್ಲೆಂಡ್‍ನ ಗ್ರೆಗ್ ರುದರ್ ಪೋರ್ಡ್,ನಾಲ್ಕನೇ ಯತ್ನದಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಿ 8.41 ಮೀಟರ್ ಗೆ ವಿಸ್ತರಿಸಿ ಸ್ವರ್ಣ ಪದಕಕ್ಕೆ ಭಾಜನರಾದರು. ಇದರೊಂದಿಗೆ ವಿಶ್ವ  ಅಥ್ಲೆಟಿಕ್‍ನಲ್ಲಿ ಬ್ರಿಟನ್ ಮೂರನೇ ಸ್ವರ್ಣ ಪದಕವನ್ನು ಪಡೆದಂತಾಗಿದೆ.

ಆದರೆ ಈ ವಿಭಾಗದಲ್ಲಿ ಫೆವರಿಟ್ ಎನಿಸಿದ್ದ ಅಮೆರಿಕದ ಜೆಫ್ ಹೆಂಡರ್ಸನ್ ಮೂರು ಯತ್ನಗಳ ಪೈಕಿ ಕೇವಲ ಒಂದರಲ್ಲಿ 7.95 ಮೀಟರ್ ಜಿಗಿದದ್ದು ಬಿಟ್ಟರೆ ಮೀಟರ್ ಜಿಗಿದದ್ದು ಬಿಟ್ಟರೆ ಮಿಕ್ಕಂತೆ ಅವರು ಸ್ಪರ್ಧೆಗೆ ಅನರ್ಹರೆನಿಸಿದರು. ಇನ್ನುಳಿದಂತೆ ಈ ವಿಭಾಗದಲ್ಲಿ ಆಸ್ಟ್ರೇಲಿಯಾದ  ಪ್ಯಾಬ್ರೈಸ್ ಲ್ಯಾಪಿರಿ (8.24 ಮೀಟರ್) ಬೆಳ್ಳಿ ಗೆದ್ದರೆ, ಚೀನಾದ ವಾಂಗ್ ಜಿಯಾನಾನ್ 8.18 ಮೀಟರ್ ದೂರ ಜಿಗಿದು ಕಂಚಿಗೆ ತೃಪ್ತರಾದರು.

ಫೈನಲ್‍ಗೆ ಕ್ರಿಸ್ಟಿನಿ
ಮಹಿಳೆಯರ 400 ಮೀಟರ್ ಓಟದ ಸೆಮಿಫೈನಲ್‍ನಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ  ಫೈನಲ್ ಪ್ರವೇಶಿಸುವಲ್ಲಿ ಹಾಲಿ ಚಾಂಪಿಯನ್ ಹಾಗೂ ಬ್ರಿಟನ್‍ನ ಕ್ರಿಸ್ಟಿನಿ ಒಹ್ರೊಗು ಯಶಸ್ವಿಯಾದರು.

31 ವರ್ಷದ ಕ್ರಿಸ್ಟಿನಿ 50.16 ಸೆ.ಗಳಲ್ಲಿ ಗುರಿಮುಟ್ಟಿದರು. ಇದು ಈ ಋತುವಿನಲ್ಲೇ ಆಕೆಯಿಂದ ವ್ಯಕ್ತವಾದ ಶ್ರೇಷ್ಠ ಸಾಧನೆ ಎನಿಸಿಕೊಂಡಿತಲ್ಲದೆ ಗುರುವಾರ ನಡೆಯಲಿರುವ ಫೈನಲ್‍ನಲ್ಲಿ ಚಿನ್ನ ಗೆಲ್ಲುವ ಆಕೆಯ ಆಸೆಗೆ ಬಲ ತುಂಬಿತು. ಏಳು ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಒಲಿಂಪಿಕ್ಸ್‍ನಲ್ಲಿ ಚಿನ್ನ ಗೆದ್ದಿದ್ದ ಕ್ರಿಸ್ಟಿನಿ, ಮಂಗಳವಾರದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ನಾಲ್ಕನೇ ವೇಗದ ಓಟಗಾರ್ತಿ ಎನಿಸಿಕೊಂಡರು.

ಗುರುವಾರ ನಡೆಯಲಿರುವ ಅಂತಿಮ ಸೆಣಸಾಟದಲ್ಲಿ ಅಮೆರಿಕದ ಅಲಿಸನ್ ಫೆಲಿಕ್ಸ್ ಅವರಿಗೆ ತೀವ್ರ ಪ್ರತಿಸ್ಪರ್ಧೆ ಒಡ್ಡುವುದು ಖಾತ್ರಿಯಾಗಿದೆ. ಅರ್ಹತಾ ಸುತ್ತಿನಲ್ಲಿ ಅಲಿಸನ್ 49.89 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಋತುವಿನ ಶ್ರೇಷ್ಠ ಸಾಧನೆಗೈದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com