
ನವದೆಹಲಿ: ಎರಡನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ, ಅಕ್ಟೋಬರ್ 3ರಿಂದ ಟೂರ್ನಿ ಆರಂಭವಾಗಲಿದ್ದು ಡಿಸೆಂಬರ್ 20ಕ್ಕೆ ಮುಕ್ತಾಯಗೊಳ್ಳಲಿದೆ.
ಅ.3ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ತಂಡ ಹಾಲಿ ಚಾಂಪಿಯನ್ ಅಟ್ಲೆಟಿಕೊಡಿ ಕೋಲ್ಕತಾ ವಿರುದ್ಧ ಚೆನ್ನೈನ ಜವಾಹರ್‍ಲಾಲ್ ನೆಹರು
ಕ್ರೀಡಾಂಗಣದಲ್ಲಿ ಸೆಣಸಲಿದೆ. ಒಟ್ಟಾರೆಯಾಗಿ 8 ತಂಡಗಳ ನಡುವೆ ತವರು ಹಾಗೂ ಹೊರ ಅಂಗಣ ಆಧಾರದ ಮೇಲೆ 61 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯಲಿರುವ ತಂಡಗಳು ಸೆಮಿ ಫೈನಲ್ ಸುತ್ತಿಗೆ ಪ್ರವೇಶ ಪಡೆಯಲಿವೆ.
Advertisement