ಇಂಡಿಯನ್ ಏಸಸ್ ಶುಭಾರಂಭ

ದ್ವಿತೀಯ ಆವೃತ್ತಿಯ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಟೂರ್ನಿಯಲ್ಲಿನ ತನ್ನ ಮೊದಲ ಅಭಿಯಾನದಲ್ಲಿ ಹಾಲಿ ಚಾಂಪಿಯನ್ ಇಂಡಿಯನ್ ಏಸಸ್...
ಐಪಿಟಿಎಲ್
ಐಪಿಟಿಎಲ್
Updated on
ಕೋಬ್(ಜಪಾನ್): ದ್ವಿತೀಯ ಆವೃತ್ತಿಯ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಟೂರ್ನಿಯಲ್ಲಿನ ತನ್ನ ಮೊದಲ ಅಭಿಯಾನದಲ್ಲಿ ಹಾಲಿ ಚಾಂಪಿಯನ್ ಇಂಡಿಯನ್ ಏಸಸ್ ತಂಡ, 25-24 ಅಂಕಗಳಿಂದ, ಜಪಾನ್ ವಾರಿಯರ್ಸ್ ತಂಡವನ್ನು ಮಣಿಸಿತು. 
ಬುಧವಾರ ಆರಂಭವಾದ ಪಂದ್ಯಾವಳಿಯಲ್ಲಿ ದಿನದ ಮೊದಲ ಮುಖಾಮುಖಿಯಲ್ಲಿ ಯುಎಇ ರಾಯಲ್ಸ್ ಹಾಗೂ ಸಿಂಗಾಪುರ ಸ್ಲಾಮರ್ಸ್ ಸೆಣಸಿದ್ದವು. ಐದು ಸುತ್ತುಗಳ ಆ ಮುಖಾಮುಖಿಯಲ್ಲಿ ರಾಯಲ್ಸ್ ತಂಡ, ಸಿಂಗಾಪುರ ತಂಡವನ್ನು 26-20 ಅಂಕಗಳ ಅಂತರದಲ್ಲಿ ಮಣಿಸಿತು. ಇನ್ನು, ದ್ವಿತೀಯ ಮುಖಾಮುಖಿಯಲ್ಲಿ ಕಣಕ್ಕಿಳಿದಿದ್ದ ಭಾರತ, ಮೊದಲು ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಅಚ್ಚರಿಯ ಸೋಲು ಕಂಡಿತು. 
ಜಪಾನ್‍ನ ಮಾರಿಯಾ ಶರಪೋವಾ ಹಾಗೂ ಹರ್ಬರ್ಟ್ ವಿರುದ್ಧ ಸೆಣಸಿದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ, 5-6 ಅಂತರದಲ್ಲಿ ಸೋಲು ಕಂಡಿತು! ಆನಂತರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ, ಏಸಸ್‍ನ ಸಮಂತಾ ಸ್ಟಾಸರ್, ವಾರಿಯರ್ಸ್ ಮಾರಿಯಾ ಶರಪೋವಾ ವಿರುದ್ಧ 4-6 ಅಂತರದ ಸೋಲು ಕಂಡರು. ಇದಾದ ಮೇಲೆ ನಡೆದ, ಪುರುಷರ ಸಿಂಗಲ್ಸ್‍ನಲ್ಲಿ ಏಸಸ್‍ನ ಫ್ಯಾಬ್ರಿಸ್ ಸ್ಯಾಂಟೊರೊ, ಮರಾಟ್ ಸಾಫಿನ್ ವಿರುದ್ಧ 6-2 ಅಂತರದಲ್ಲಿ ಗೆಲವು ದಾಖಲಿಸಿದರು.
ಇತ್ತಂಡಗಳ ಪುರುಷರ ಡಬಲ್ಸ್‍ನಲ್ಲಿ ಏಸಸ್‍ನ ಮೊನ್ ಫಿಸ್-ಬೋಪಣ್ಣ ಜೋಡಿ, ನಿಶಿಕೋರಿ-ಹರ್ಬರ್ಟ್ ಜೋಡಿ ವಿರುದ್ಧ 6-4ರ ಜಯ ದಾಖಲಿಸಿತು. ಅಂತಿಮ ಸುತ್ತಿನಲ್ಲಿ, ಏಸಸ್‍ನ ಗೇಲ್ ಮೊನ್ ಫಿಸ್ ಅವರು, ಸ್ಥಳೀಯ ಆಟಗಾರ ಕಿಯ್ ನಿಶಿಕೋರಿ ವಿರುದ್ಧ 4-6 ಅಂತರದ ಸೋಲು ಕಂಡರು. ಹೀಗೆ, ಐದು ಸುತ್ತುಗಳಲ್ಲಿ ಏಸಸ್ ತಂಡ ಕೇವಲ 2 ಅಂಕ ದಾಖಲಿಸಿತಾದರೂ ಅಂಕಗಳ ಆಧಾರದಲ್ಲಿ 25-24 ಅಂತರದ ಜಯ ಸಾಧಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com