ಧ್ರುವ್ ಮತ್ತೆ ಚಾಂಪಿಯನ್

ಪಂದ್ಯಾವಳಿಯ ಆರಂಭದಿಂದಲೂ ಮೇಲ್ಪಂಕ್ತಿ ಯಲ್ಲಿದ್ದ ಮಾಜಿ ರಾಷ್ಟ್ರೀಯ ಚಾಂಪಿಯನ್ ಶಬ್ಬೀರ್ ಧನ್ಕೋಟ್ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸಿದ ಹಾಲಿ...
ಧ್ರುವ್ ಸರ್ದಾ - ಸಬೀನಾ ಅತಿಕಾ
ಧ್ರುವ್ ಸರ್ದಾ - ಸಬೀನಾ ಅತಿಕಾ
Updated on
ಬೆಂಗಳೂರು: ಪಂದ್ಯಾವಳಿಯ ಆರಂಭದಿಂದಲೂ ಮೇಲ್ಪಂಕ್ತಿ ಯಲ್ಲಿದ್ದ ಮಾಜಿ ರಾಷ್ಟ್ರೀಯ ಚಾಂಪಿಯನ್ ಶಬ್ಬೀರ್ ಧನ್ಕೋಟ್ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸಿದ ಹಾಲಿ ಚಾಂಪಿಯನ್  ಆಗಿದ್ದ ಧ್ರುವ್ ಸರ್ದಾ, ಶನಿವಾರ ಮುಕ್ತಾಯಗೊಂಡ  `ದ ಆ್ಯಕ್ಸಿಡೆಂಟ್ ರಿಲೀಫ್  ಕೇರ್ 26ನೇ ರಾಷ್ಟ್ರೀಯ ಟೆನ್‍ಪಿನ್ ಚಾಂಪಿಯನ್‍ಶಿಪ್ 'ನಲ್ಲಿ ಪುನಃ ಚಾಂಪಿಯನ್ ಎನಿಸಿದರು.
ಇನ್ನು ಮಹಿಳೆಯರ ವಿಭಾಗದ ಅಂತಿಮ ಸುತ್ತಿನಲ್ಲಿ ಅನುಕೃತಿ ಬಿಶ್ನೋಯ್  ಅವರನ್ನು ಮಣಿಸಿದ ತಮಿಳುನಾಡಿನ ಸಬೀನಾ ಅತಿಕಾ ಸತತ ಮೂರನೇ ಬಾರಿಗೆ ಚಾಂಪಿಯನ್ ಆದರು. ಈ ಮೂಲಕ, ರಾಷ್ಟ್ರೀಯ ಟೂರ್ನಿ ಯಲ್ಲಿ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್  ಪ್ರಶಸ್ತಿ ಗಳಿಸಿದ ಹೆಗ್ಗಳಿಕೆಗೆ ಭಾಜನರಾದರು. ಇದು ಅವರ 9ನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ.ಇನ್ನು, ಪುರುಷರ ವಿಭಾಗದಲ್ಲಿ ಈ ಬಾರಿಯ ಟೂರ್ನಿಯಲ್ಲಿ ಆರಂಭಿಕ ವೈಫಲ್ಯ ಮೆಟ್ಟಿ ಉತ್ತಮ ಪ್ರದರ್ಶನ ನೀಡಿದ ರಾಜ್ಯದ ಆಕಾಶ್  ಅಶೋಕ್ ಕುಮಾರ್ 3ನೇ ಸ್ಥಾನ ಪಡೆದರು.
ಶಬ್ಬೀರ್‍ಗೆ ಕೂದಲೆಳೆಯ ಸೋಲು : ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಧ್ರುವ ಹಾಗೂ ಶಬ್ಬೀರ್ ಅವರ ಸೆಣಸು ಕುತೂಹಲಕಾರಿ ಯಾಗಿತ್ತು. ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಎಂಬ ಹೆಗ್ಗಳಿಕೆ ಹೊಂದಿರುವ ಶಬ್ಬೀರ್‍ಗೆ ಉತ್ತಮ ಪೈಪೋಟಿ ನೀಡಿದ ಧ್ರುವ, ಎರಡು ಸುತ್ತುಗಳ ಸ್ಪರ್ಧೆಗಳಲ್ಲಿ ಕ್ರಮವಾಗಿ 236-223 ಹಾಗೂ 257-224 (ಒಟ್ಟು 493-
447) ಅಂತರದ ಅಂಕಗಳನ್ನು ಗಳಿಸಿ ವಿಜಯಿಯಾದರು. ಈ ಪಂದ್ಯಕ್ಕೂ ಮುನ್ನ,  ಪುರುಷರ 3ನೇ ಹಾಗೂ 4ನೇ ಸ್ಥಾನಗಳಿಗಾಗಿ ನಡೆದಿದ್ದ ಸ್ಪರ್ಧೆಯಲ್ಲಿ ರಾಜ್ಯದ ಆಕಾಶ್,  ಪರ್ವೇಜ್ ಅಹ್ಮದ್ ಅವರನ್ನು 398- 388 ಅಂತರದಲ್ಲಿ ಮಣಿಸಿ, ಗೆಲವು ಸಾಧಿಸಿದರು.
2ನೇ ಶ್ರೇಯಾಂಕಿತೆಗೆ ನಿರಾಸೆ: ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನ ಸ್ಪರ್ಧೆಯಲ್ಲಿ, 2ನೇ ಶ್ರೇಯಾಂಕಿತೆ, ಹರ್ಯಾಣದ ಅನುಕೃತಿ ಬಿಷ್ಣೋಯï ವಿರುದ್ಧ ಸೆಣಸಿದ ಸಬೀನಾ, 223-156 ಅಂಕಗಳ ಅಂತರದಲ್ಲಿ ಅವರನ್ನು ಮಣಿಸಿ, ಚಾಂಪಿಯನ್ ಆದರು. ಮಹಾರಾಷ್ಟ್ರ ದ ಕಶ್ಮೀರಾ ತೃತೀಯ ಸ್ಥಾನ ಗಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com