
ಲಂಡನ್: ಹಾಲಿ ನಡೆಯುತ್ತಿರುವ ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತದ ವಿಶ್ವನಾಥನ್ ಆನಂದ್, ತಮ್ಮ ಆರನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಶ್ಚುಕ್‍ರನ್ನು ಎದುರಿಸಲಿದ್ದಾರೆ.
ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಮೂರು ಡ್ರಾ, ಒಂದು ಸೋಲು ಹಾಗೂ ಒಂದು ಗೆಲುವು ಪಡೆದಿರುವ ಆನಂದ್, ಈವರೆಗೆ ಒಟ್ಟು 2.5 ಅಂಕ ಪಡೆದಿದ್ದಾರೆ. ಆದರೆ, ಟೂರ್ನಿಯ ಪ್ರಶಸ್ತಿ ಸುತ್ತನ್ನು ತಲುಪಬೇಕಾದಲ್ಲಿ ಆನಂದ್ ತಮ್ಮ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದ್ದಾರೆ. ಹಾಲಿ ಟೂರ್ನಿ ಯಲ್ಲಿ, ಹಾಲೆಂಡ್‍ನ ಅನಿಶ್, ಅಮೆರಿಕದ ನಕಮುರಾ ಹಾಗೂ ಫ್ರಾನ್ಸ್ ನ ಮ್ಯಾಕ್ಸಿಮ್ ಅವರು ತಲಾ 3 ಅಂಕಗಳ ಪಡೆದು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
Advertisement