ಮಿಗಿಲಾಗಿ ನಾಯಕ ಜೇಸನ್ ಹೋಲ್ಡರ್ (17) ಮತ್ತು ಜೆರೋಮ್ ಟೇಲರ್ (12) ಬಿಟ್ಟರೆ ಮಿಕ್ಕವರು ಎರಡಂಕಿ ದಾಟದೆ ಹೋದದ್ದು ಕಾಂಗರೂಗಳ ಈ ಭರ್ಜರಿ ಗೆಲುವಿಗೆ ಕಾರಣವಾಯಿತು. ಪ್ಯಾಟಿನ್ಸನ್ ಅಲ್ಲದೆ, ಜೋಶ್ ಹ್ಯಾಜ್ಲೆವುಡ್ 33ಕ್ಕೆ 3 ಮತ್ತು ಮಿಚೆಲ್ ಮಾರ್ಶ್ 36ಕ್ಕೆ 1 ವಿಕೆಟ್ ಗಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ 114 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 583 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ವಿರುದ್ಧ ಡರೆನ್ ಬ್ರಾವೊ (108) ಗಳಿಸಿದ ಶತಕದ ನೆರವಿನಿಂದ 223 ರನ್‍ಗಳಿಗೆ ಆಲೌಟ್ ಆದ ವಿಂಡೀಸ್, ಫಾಲೋಆನ್ ಪಡೆದು ಎರಡನೇ ಇನ್ನಿಂಗ್ಸ್‍ನಲ್ಲೂ ಕಾಂಗರೂಗಳ ದಾಳಿಗೆ ನಲುಗಿತು. ಅಜೇಯ 269 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದ ಆ್ಯಡಂ ವೋಗ್ಸ್ ಸಹಜವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.