ಐ-ಲೀಗ್ ಫೇಲ್ ಎಂದ ಭುಟಿಯಾ

ಎಂಟು ವರ್ಷಗಳಷ್ಟು ಹಳೆಯದಾದ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯು ನಿರೀಕ್ಷಿತ ಮಟ್ಟದ ಯಶ ಕಾಣದೆ ಅದು ವೈಫಲ್ಯ ಕಂಡಿದೆ ಎಂಬ ಮಾತನ್ನು ಭಾರತ ಫುಟ್ಬಾಲ್ ತಂಡದ...
ಭೈಚುಂಗ್ ಭುಟಿಯಾ
ಭೈಚುಂಗ್ ಭುಟಿಯಾ

ನವದೆಹಲಿ: ಎಂಟು ವರ್ಷಗಳಷ್ಟು ಹಳೆಯದಾದ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯು ನಿರೀಕ್ಷಿತ ಮಟ್ಟದ ಯಶ ಕಾಣದೆ ಅದು ವೈಫಲ್ಯ ಕಂಡಿದೆ ಎಂಬ ಮಾತನ್ನು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಸಲಹೆಗಾರ ಭೈಚುಂಗ್ ಭುಟಿಯಾ ಒಪ್ಪಿಕೊಂಡಿದ್ದಾರೆ. 'ಪ್ರಾಮಾಣಿಕವಾಗಿ ಈ ಸಂಗತಿಯನ್ನು ಒಪ್ಪಿಕೊಳ್ಳಬೇಕು. ಐ-ಲೀಗ್ ಯಶ ಕಾಣದಿದ್ದರಿಂದಲೇ ಐಎಸ್‍ಎಲ್ ಆಗಮನವಾಗಿದೆ. ಎಲ್ ಮತ್ತು ಐ-ಲೀಗ್ ಅನ್ನು ವಿಲೀನಗೊಳಿಸುವ ಮೂಲಕ ಭಾರತದ ಫುಟ್ಬಾಲ್‍ಗೆ ಹೊಸ ಚೇತನ ತುಂಬಬಹುದು. ವಿಲೀನಕ್ಕೂ ಮುನ್ನ ಐಎಸ್‍ಎಲ್ ಇನ್ನಷ್ಟು ಋತುಗಳಲ್ಲಿ ಮುನ್ನಡೆಯಲು ಅವಕಾಶ ಕಲ್ಪಿಸಬೇಕು'' ಎಂದು ಭುಟಿಯಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com