ಜೋಶಿ ಓಮನ್ ಕೋಚ್

ಭಾರತ ತಂಡದ ಮಾಜಿ ಸ್ಪಿನ್ ಬೌಲರ್ ಹಾಗೂ ಕರ್ನಾಟಕದ ಸುನೀಲ್ ಜೋಶಿ ಓಮನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ...
ಸುನೀಲ್ ಜೋಶಿ
ಸುನೀಲ್ ಜೋಶಿ

ಬೆಂಗಳೂರು: ಭಾರತ ತಂಡದ ಮಾಜಿ ಸ್ಪಿನ್ ಬೌಲರ್ ಹಾಗೂ ಕರ್ನಾಟಕದ ಸುನೀಲ್ ಜೋಶಿ ಓಮನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಭಾರತದಲ್ಲಿ ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟಿ20 ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಓಮನ್ ತಂಡ ಸ್ಪರ್ಧಿಸುತ್ತಿದೆ. ಡಿಸೆಂಬರ್ 20ರಿಂದ ರಾಜ್‍ಕೋಟ್‍ನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, 10 ದಿನಗಳಿಗೆ ಮುಂಚೆಯೇ ಓಮನ್ ತಂಡ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದೆ. ಅರ್ಹತಾ ಸುತ್ತಿನಲ್ಲಿ ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಹಾಲೆಂಡ್ ತಂಡಗಳಿದ್ದು, ಓಮನ್ ತಂಡದ ಸ್ಪಿನ್ ಬೌಲರ್‍ಗಳಿಗೆ ಜೋಶಿ ಬಲ ತುಂಬಲು ಹೊರಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com