ವಿಜೇಂದ್ರರ್ ಸಿಂಗ್
ಕ್ರೀಡೆ
ವಿಜೇಂದರ್ ಹ್ಯಾಟ್ರಿಕ್ ಸಾಧನೆ
ವೃತ್ತಿಪರ ಬಾಕ್ಸಿಂಗ್‍ನಲ್ಲಿ ತಮ್ಮದೇ ಆದ ಹವಾ ಸೃಷ್ಠಿಸುತ್ತಿರುವ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ...
ಮ್ಯಾಂಚೆಸ್ಟರ್: ವೃತ್ತಿಪರ ಬಾಕ್ಸಿಂಗ್‍ನಲ್ಲಿ ತಮ್ಮದೇ ಆದ ಹವಾ ಸೃಷ್ಠಿಸುತ್ತಿರುವ ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಜೇಂದರ್ ಸಿಂಗ್, ಬಲ್ಗೇರಿಯಾದ ಸಮೆಟ್ ಹ್ಯೂಸೆನೊವ್ ಅವರ ವಿರುದ್ಧ ಎರಡು ಸುತ್ತಿನ ಒಳಗೆ ಟೆಕ್ನಿಕಲ್ ನಾಕೊಟ್ ಮೂಲಕ ಜಯ ಸಾಧಿಸಿದರು. ವಿಜೇಂದರ್ ಆಕ್ರಮಣಕಾರಿ ಪ್ರದರ್ಶನದ ಮುಂದೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಸಮೆಟ್, ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ನೆತರ ಎರಡನೇ ಸುತ್ತಿನಲ್ಲಿ ಕೆವಲ 35 ಸೆಕೆಂಡ್ ಆಗುವಷ್ಟರಲ್ಲೇ ಸೋಲನುಭವಿಸಿದರು. ಸಮೆಟ್ ಈ ಹಿಂದೆ 14 ಪಂದ್ಯಗಳನ್ನಾಡಿದ್ದ ಪರಿಣಾಮ ವಿಜೇಂದರ್‍ಗೆ ಇವರು ಅನುಭವಿ ಎದುರಾಳಿಯಾಗಿ ಪರಿಣಮಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ